INS ವಿಕ್ರಾಂತ್ ಕೇಸ್ – ಬಿಜೆಪಿ ಮುಖಂಡ ಕಿರಿತ್ ಸೋಮಯ್ಯಗೆ ಮಧ್ಯಂತರ ಜಾಮೀನು

Public TV
2 Min Read

ಮುಂಬೈ: ಐಎನ್‌ಎಸ್ ವಿಕ್ರಾಂತ್ ಹೆಸರಲ್ಲಿ ಸಂಗ್ರಹಿಸಿದ್ದ ದೇಣಿಗೆಯನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಅಡಿಯಲ್ಲಿ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಅವರನ್ನು ಬಂಧಿಸದಂತೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಒಂದು ವೇಳೆ ಸೋಮಯ್ಯ ಅವರನ್ನು ಬಂಧಿಸಿದಲ್ಲಿ, 50,000 ರೂ. ವೈಯಕ್ತಿಕ ಬಾಂಡ್ ಮೇಲೆ ಅವರನ್ನು ಬಿಡುಗಡೆ ಮಾಡಬೇಕು ಎಂದು ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರ ಏಕಸದಸ್ಯ ಪೀಠ ಆದೇಶಿಸಿದೆ. ಇದನ್ನೂ ಓದಿ: ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

KIRIT SOMAYYA

ಕಿರಿತ್ ಸೋಮಯ್ಯ ಅವರ ವಿರುದ್ಧ ಮಾಡಲಾದ ಆರೋಪಗಳು ಮಾಧ್ಯಮದ ವರದಿಗಳನ್ನು ಆಧರಿಸವೆ ಎಂದು ಎಫ್‌ಐಆರ್ ಸೂಚಿಸುತ್ತದೆ. 57 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಆರೋಪ ಇದ್ದರೂ ದೂರುದಾರರು ಯಾವ ಆಧಾರದ ಮೇಲೆ ಅಂಕಿ ಅಂಶಗಳನ್ನು ಬರೆದಿದ್ದಾರೆ ಎಂಬುದಕ್ಕೆ ದಾಖಲೆಗಳಿಲ್ಲ. 2013ರಲ್ಲಿ ಹಣ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ವರೆಗೆ ಯಾವುದೇ ದೂರು ದಾಖಲಾಗಿಲ್ಲ. 9 ವರ್ಷಗಳ ನಂತರ ದಾಖಲಾಗಿರುವ ಒಂದು ದೂರು ಸಹ ಅಸ್ಪಷ್ಟವಾಗಿದೆ. ಇದರಲ್ಲಿ ನಿಖರ ಆಧಾರವಿಲ್ಲ ಎಂದು ಏಕಸದಸ್ಯದ ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಹೊಸ ರೂಪಾಂತರಿ ʼXEʼ – ಮುಂಬೈನಲ್ಲಿ ಮೊದಲ

ಪ್ರಕರಣ ಕುರಿತ ತನಿಖೆಗೆ ಸಹಕರಿಸಬೇಕು. ಏ.18ರಿಂದ ನಾಲ್ಕು ದಿನಗಳ ಕಾಲ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಎಂದು ಸೋಮಯ್ಯ ಅವರಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಏ.28ಕ್ಕೆ ಮುಂದೂಡಿದ್ದಾರೆ. ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಟ್ರಾಂಬೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ರಾಜ್ಯಸರ್ಕಾರದ ಪರ ಹಿರಿಯ ವಕೀಲ ಶಿರೀಶ್ ಗುಪ್ತೆ ಅವರು ಸೋಮಯ್ಯ ಅವರು ಜಾಮೀನಿಗೆ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿದ್ದಾರೆ. ತಂದೆ-ಮಗ ಇಬ್ಬರೂ ನಗರದಲ್ಲಿ ಇತರರೊಂದಿಗೆ ಹಲವಾರು ಕ್ಯಾಂಪೇನ್‌ಗಳನ್ನು ನಡೆಸಿದ್ದರಿಂದ ನಿಖರವಾದ ಮೊತ್ತ ಪತ್ತೆಹಚ್ಚಲು ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸುವುದು ಅವಶ್ಯವಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಹಿಜಬ್, ಹಲಾಲ್‍ನಿಂದಾಗಿ ಬೆಲೆ ಏರಿಕೆಯ ಗಮನ ದೂರವಾಗಿದೆ: ಶಶಿ ತರೂರ್

KIRITH

ಹಿನ್ನೆಲೆ ಏನು?
ಐಎನ್‌ಎಸ್ ವಿಕ್ರಾಂತ್ ಅನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಸಲುವಾಗಿ ಕಿರೀಟ್ ಸೋಮೈಯ ಅವರು 57 ಕೋಟಿ ಸಂಗ್ರಹಿಸಿದ್ದರು. ಈ ಹಣವನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಸೇನೆಯ ಮಾಜಿ ಅಧಿಕಾರಿಯೊಬ್ಬರು ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 6ರಂದು ದೂರು ದಾಖಲಿಸಿದ್ದರು. ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಸೋಮಯ್ಯ ಹಾಗೂ ಪುತ್ರನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 406 (ನಂಬಿಕೆಗೆ ವಂಚಿಸಿ ಅಪರಾಧ), 420 (ಆಸ್ತಿ ವಿತರಣೆ ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *