ಶಿವ, ಪಾರ್ವತಿ ವೇಷ ಧರಿಸಿ ಹಣದುಬ್ಬರದ ಬಗ್ಗೆ ನಾಟಕ- ಶಿವ ವೇಷಧಾರಿಯ ಬಂಧನ

Public TV
2 Min Read

ದಿಸ್ಪುರ್: ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್‌ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆಯೇ ಶಿವ-ಪಾರ್ವತಿಯ ವೇಷ ಧರಿಸಿ ಬೀದಿ ನಾಟಕದ ಮೂಲಕ ಪ್ರತಿಭಟನೆ ನಡೆಸಿರುವ ಕಲಾವಿದರ ಮೇಲೆ ಕೇಸ್ ದಾಖಲಾಗಿದೆ. ಈಶ್ವರ ಪಾತ್ರಧಾರಿಯ ಬಂಧನವೂ ಆಗಿದೆ.

ಅಸ್ಸಾಂನ ನಾಗಾಂವ್‌ನಲ್ಲಿ ಇಬ್ಬರು ಶಿವ ಹಾಗೂ ಪಾರ್ವತಿ ದೇವಿಯ ವೇಷ ಧರಿಸಿ ದೇಶದ ಹಣದುಬ್ಬರದ ಬಗ್ಗೆ ನಾಟಕವಾಡಿದ್ದಾರೆ. ಇದು ಹಿಂದೂ ಸನಾತನ ಧರ್ಮದವರ ಭಾವನೆಗೆ ಧಕ್ಕೆ ಉಂಟುಮಾಡಿದೆ ಎಂದು ನಾಗಾಂವ್ ಜಿಲ್ಲೆಯ ಹಿಂದೂ ಪರಿಷತ್ ಹಾಗೂ ಭಜರಂಗದಳ ಆರೋಪಿಸಿ, ತೀವ್ರವಾಗಿ ಖಂಡಿಸಿದೆ.

ಘಟನೆ ಏನು?
ಶನಿವಾರ ಸಂಜೆ ನಾಟಕ ಕಲಾವಿದರಾದ ಬಿರಿಂಚಿ ಬೋರಾ ಮತ್ತು ಕರಿಷ್ಮಾ, ಶಿವ ಮತ್ತು ಪಾರ್ವತಿ ವೇಷ ಧರಿಸಿ, ರಸ್ತೆಗಿಳಿದು ಇಂಧನ, ಆಹಾರ ಪದಾರ್ಥ ಹಾಗೂ ಇತರ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿದ್ದಾರೆ. ಇಬ್ಬರೂ ಬೈಕ್‌ನಲ್ಲಿ ನಾಗಾಂವ್‌ನ ಕಾಲೇಜು ಚೌಕ್‌ಗೆ ಆಗಮಿಸಿ, ವಾಹನದಲ್ಲಿ ಇಂಧನ ಖಾಲಿಯಾಗುತ್ತಿರುವ ಬಗ್ಗೆ ನಾಟಕವಾಡಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನದ ಊಟ ಇಲ್ಲ, ಶಿಕ್ಷಕರಿಗೆ ಮಸಾಜ್ ಬೇಕಂತೆ – ವಿದ್ಯಾರ್ಥಿಗಳಿಂದಲೇ ಶಾಲೆಯ ಆಸ್ತಿ ಧ್ವಂಸ

ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಶಿವ ವೇಷಧಾರಿ, ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಸ್ಥಳದಲ್ಲಿ ನೆರೆದವರು ಕುತೂಹಲದಿಂದ ನೋಡಿದ್ದಾರೆ ಹಾಗೂ ಪಾತ್ರಧಾರಿಗಳು ಏರುತ್ತಿರುವ ಹಣದುಬ್ಬರವನ್ನು ಪ್ರತಿಭಟಿಸುವಂತೆ ಒತ್ತಾಯಿಸಿದ್ದಾರೆ.

ಇದಾದ ಬಳಿಕ ಬಡಾ ಬಜಾರ್ ಪ್ರದೇಶಕ್ಕೂ ಆಗಮಿಸಿದ ಕಲಾವಿದರು ಇದೇ ರೀತಿ ಬೀದಿ ನಾಟಕ ಪ್ರದರ್ಶಿಸಿದರು. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಗಮನಕ್ಕೆ ಬಂದಿದ್ದು, ಅವರಿಬ್ಬರೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೊಲೀಸ್ ವಾಹನದಲ್ಲಿ ಕುರಿ ದರ್ಬಾರ್ – ಮುಗ್ದ ಪ್ರಾಣಿಯ ಜಾಲಿ ರೈಡ್ ನೋಡಿ ನೆಟ್ಟಿಗರು ಫಿದಾ

ಶಿವ-ಪಾರ್ವತಿ ಪಾತ್ರಧಾರಿಗಳಾದ ಬಿರಿಂಚಿ ಬೋರಾ ಹಾಗೂ ಕರೀಶ್ಮಾ ವಿರುದ್ಧ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಶಿವ ಪಾತ್ರಧಾರಿ ಬೋರಾನನ್ನು ಬಂಧಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *