ನ್ಯೂ ಇಯರ್ ಎಂಜಾಯ್ ಮಾಡೋದ್ರ ಜೊತೆಗೆ ಜನರಿಗೂ ಜವಾಬ್ದಾರಿ ಇರಬೇಕು: ರಾಮಲಿಂಗಾರೆಡ್ಡಿ

Public TV
2 Min Read

ಬೆಂಗಳೂರು: ನ್ಯೂ ಇಯರ್ ಎಂಜಾಯ್ ಮಾಡೋದ್ರ ಜೊತೆಗೆ ಜನರಿಗೂ ಕೆಲವು ಜವಾಬ್ದಾರಿ ಇರಬೇಕು. ಹೊಸ ವರ್ಷಾಚರಣೆಗೆ ಸುಮಾರು ಒಂದು ಲಕ್ಷ ಜನ ಇದ್ರು. ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಬೆಂಗಳೂರು ಪೊಲೀಸರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ವಿಕಾಸಸೌಧದ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ ಸಚಿವರು, ಎಲ್ಲ ಅಧಿಕಾರಿಗಳಿಗೂ ಹೊಸ ವರ್ಷದ ಶುಭಾಶಯವನ್ನು ತಿಳಿಸಿದರು. ಈ ವೇಳೆ ಮಾತನಾಡಿದ ಸಚಿವರು, ನಗರದಲ್ಲಿ ಪೊಲೀಸ್ ಬಂದೋಬಸ್ತ್ ಚೆನ್ನಾಗಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇದೂವರೆಗೂ ಎಲ್ಲಿಯೂ ಯಾವ ಕೇಸ್ ಸಹ ದಾಖಲಾಗಿಲ್ಲ. ಇನ್ನು ಕೆಲವು ಜನ ಹೆಚ್ಚಿಗೆ ಕುಡಿದ್ದರಿಂದ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಕೆಲವು ಸ್ಥಳಗಳಲ್ಲಿ ಕುಡಿದ ಮಹಿಳೆಯರನ್ನು ಪೊಲೀಸರು ಮನೆಯವರೆಗೂ ಹೋಗಿ ಬಿಟ್ಟುಬಂದಿದ್ದಾರೆ ಅಂತಾ ಹೇಳಿದ್ರು. ಇದನ್ನೂ ಓದಿ: ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಲ ಚಕ್ರ ತಿರುಗುತ್ತಿದ್ದು, ಸದ್ಯ ಬಿಜೆಪಿಯವರು ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂದ್ರು. ಸಂಸದೆ ಶೋಭಾ ಕರಂದ್ಲಾಜೆ ಕಾನೂನಿಗಿಂತ ದೊಡ್ಡವರಾ? ಅವರನ್ನು ನಾನು ಅಥವಾ ಮುಖ್ಯಮಂತ್ರಿಗಳು ಹೋಗಿ ಬಂಧಿಸಲಿಕ್ಕೆ ಆಗುತ್ತದೆಯಾ? ಸಂಬಂಧಪಟ್ಟ ಅಧಿಕಾರಿಗಳು ಕಾನೂನಾತ್ಮಕವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಮಹದಾಯಿ ಹೋರಾಟಗಾರರ ಮೇಲೆ ಬಿಜೆಪಿ ಗೂಂಡಾಗಿರಿ..!

ಮಹದಾಯಿ ಹೋರಾಟಗಾರರಾದ ವೀರೇಶ್ ಸೊಬರದಮಠ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದಕ್ಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಈ ಬಾರಿಯ ಹೊಸ ವರ್ಷದಲ್ಲೂ ಕಾಮುಕರ ಕಾಟ- ಚರ್ಚ್‍ಸ್ಟ್ರೀಟ್‍ನಲ್ಲಿ ಯುವತಿಯರ ಅನುಚಿತ ವರ್ತನೆ

ವಿಕಾಸಸೌಧದ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ಡಿಜಿಪಿ ಪ್ರವೀಣ್ ಸೂದ್, ಗುಪ್ತಚರ ಇಲಾಖೆ ಡಿಜಿಪಿ ಎ.ಎಂ. ಪ್ರಸಾದ್, ಎಂ.ಎನ್. ರೆಡ್ಡಿ ಸೇರಿದಂತೆ ಇತರೆ ಡಿಜಿಪಿ, ಎಡಿಜಿಪಿ ಹಾಗೂ ಐಜಿಪಿ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿಗಳು ಗೃಹ ಸಚಿವರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದರು. ಇದನ್ನೂ ಓದಿ: 2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ! ಒಂದಿಷ್ಟು ಸಂತಸ, ಸ್ವಲ್ಪ ಬೇಸರ, ಒಂದಷ್ಟು ನೋವು

 

Share This Article
Leave a Comment

Leave a Reply

Your email address will not be published. Required fields are marked *