ಟ್ರಂಪ್ 48 ಗಂಟೆ ಡೆಡ್‌ಲೈನ್ – ಮಿತ್ರರಾಷ್ಟ್ರಗಳಿಗಷ್ಟೇ ಹಾರ್ಮುಜ್‌ ಜಲಸಂಧಿ ತೆರೆದ ಇರಾನ್‌

3 Min Read

– ಅಮೆರಿಕದ ಮತ್ತೊಂದು ಎಫ್-15 ಫೈಟರ್ ಜೆಟ್ ಉಡೀಸ್‌
– ಇತ್ತ ನ್ಯೂಕ್ಲಿಯರ್ ಸಬ್‌ಮರೀನ್ ತಂದ ಇಂಗ್ಲೆಂಡ್

ಟೆಹ್ರಾನ್‌/ವಾಷಿಂಗ್ಟನ್‌: ಇರಾನ್ ಹಾರ್ಮುಜ್ ಜಲಸಂಧಿಯನ್ನ (Strait of Hormuz) ವಿರೋಧಿಗಳಿಗೆ ಬಂದ್ ಮಾಡಿರೋ ಕಾರಣ ಜಗತ್ತಿನಾದ್ಯಂತ ತೈಲ, ಅನಿಲಕ್ಕೆ ಹಾಹಾಕಾರ ಎದ್ದಿದೆ. ಇದರ ನಡುವೆ, ಹಾರ್ಮುಜ್ ಜಲಸಂಧಿಯನ್ನ 48 ಗಂಟೆಗಳಲ್ಲಿ ಸಂಪೂರ್ಣವಾಗಿ ಓಪನ್ ಮಾಡಬೇಕು. ಇಲ್ಲವಾದಲ್ಲಿ ವಿದ್ಯುತ್ ಸ್ಥಾವರಗಳನ್ನ ಸರ್ವನಾಶ ಮಾಡೋದಾಗಿ ಇರಾನ್‌ಗೆ ಟ್ರಂಪ್ (Donald Trump) ಎಚ್ಚರಿಕೆ ಕೊಟ್ಟಿದ್ದಾರೆ.

- Advertisement -

ಜಾಗತಿಕ ತೈಲ (Oil) ಸರಬರಾಜಿನ ಸುಮಾರು 20 ಪ್ರತಿಶತ ಭಾಗ ಈ ಮಾರ್ಗದ ಮೂಲಕವೇ ಸಾಗಾಣೆ ಆಗಬೇಕಿದೆ. ಟ್ರಂಪ್ ಡೆಡ್‌ಲೈನ್‌ಗೆ ಇರಾನ್ ಡೋಂಟ್‌ಕೇರ್ ಅಂದಿದೆ. ನಮ್ಮ ಮೂಲಸೌಕರ್ಯಗಳನ್ನ ನಾಶಪಡಿಸಿದ್ದೇ ಆದಲ್ಲಿ ರಣಭೀಕರವಾಗಿ ನಮ್ಮ ಪ್ರತಿದಾಳಿ ಇರುತ್ತೆ. ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ಎಲ್ಲಾ ಪ್ರಮುಖ ಇಂಧನ ಘಟಕಗಳು, ತೈಲ ಶುದ್ಧೀಕರಣ ಘಟಕಗಳು, ಬಂದರುಗಳು (Port) ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೂ ದಾಳಿ ನಡೆಸ್ತೇವೆ ಎಂದು ಎಚ್ಚರಿಕೆ ಕೊಟ್ಟಿದೆ.

- Advertisement -

- Advertisement -

ಟ್ರಂಪ್‌ 48 ಗಂಟೆ ಡೆಡ್‌ಲೈನ್‌ ನೀಡಿದ ಬೆನ್ನಲ್ಲೇ ಶತ್ರುಗಳಿಗೆ ಹೊರತುಪಡಿಸಿ ಎಲ್ಲಾ ಮಿತ್ರ ರಾಷ್ಟ್ರಗಳಿಗೆ ಇರಾನ್‌ ಹಾರ್ಮುಜ್ ಜಲಸಂಧಿ ಓಪನ್ ಮಾಡಿದೆ. ಮತ್ತೊಂದ್ಕಡೆ, ಹಾರ್ಮುಜ್ ಜಲಸಂಧಿ ಕೈವಶಕ್ಕೆ ಅಮೆರಿಕ ಸಿದ್ಧತೆ ನಡೆಸಿದೆ. ಇದನ್ನೂ ಓದಿ: Explainer | ಹಾರ್ಮುಜ್‌ ಜಲಸಂಧಿಯಲ್ಲಿ ಸ್ಫೋಟಕ ಇರಿಸಿದ ಇರಾನ್‌ – ತೆಗೆದುಹಾಕಲು ಸಿದ್ಧ ಎಂದ ಜಪಾನ್‌; ಹೇಗೆ ಸಾಧ್ಯ?

- Advertisement -

ಮತ್ತೊಂದೆಡೆ ಅಮೆರಿಕದ ಪರವಾಗಿ ಮಿತ್ರಕೂಟ ಇಂಗ್ಲೆಂಡ್ ಇದೀಗ ಹಾಮುರ್ಜ್ ಬಳಿ ನ್ಯೂಕ್ಲಿಯರ್ (Nuclear) ಜಲಾಂತರ್ಗಾಮಿ ಅನ್ನು ನಿಯೋಜಿಸಿದೆ. ಈ ಮಧ್ಯೆ, ಇರಾನ್ ತಕ್ಷಣವೇ ದಾಳಿ ನಿಲ್ಲಿಸಬೇಕು ಅಂತ ಜಿ7 ರಾಷ್ಟ್ರಗಳು ಇರಾನ್‌ಗೆ ಒತ್ತಾಯಿಸಿವೆ.

ಅಮೆರಿಕದ ಮತ್ತೊಂದು ಜೆಟ್‌ ಉಡೀಸ್‌
ಅಮೆರಿಕದ ಮತ್ತೊಂದು ಎಫ್-15 ಫೈಟರ್ ಜೆಟ್ ಅನ್ನು ಹಾರ್ಮುಜ್ ಜಲಸಂಧಿ ಮೇಲೆ ಇರಾನ್‌ನ ಡಿಫೆನ್ಸ್ ಸಿಸ್ಟಂ ಹೊಡೆದು ಹಾಕಿದೆ. ಇಸ್ರೇಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆನ್ ಗುರಿಯನ್ ಮೇಲೆ ಇರಾನ್‌ನ ಅರಾಶ್-2 ಡ್ರೋನ್ ದಾಳಿ ಮಾಡಿದೆ. ಅಲ್ಲದೆ, ನಿನ್ನೆ ರಾತ್ರಿ ಇಸ್ರೇಲ್‌ನ ನ್ಯೂಕ್ಲಿಯರ್ ಸೌಕರ್ಯಗಳ ಬಳಿ ಮಿಸೈಲ್ ದಾಳಿ ಮಾಡಿದ್ದು, 100 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಡಿಮೋನ್, ಅರಾದ್ ನಗರಗಳ ಮೇಲೆ ಇರಾನ್ ಬಾಂಬ್ ಮಳೆ ಸುರಿಸಿದೆ. ಇದನ್ನೂ ಓದಿ: ಕತಾರ್‌ನಲ್ಲಿ ಸೇನಾ ಹೆಲಿಕಾಪ್ಟರ್ ಪತನ – 6 ಮಂದಿ ಸಾವು, ಓರ್ವ ನಾಪತ್ತೆ

ʻಚೋಟಾ ಇಂಡಿಯಾʼ ಮೇಲೆ ಭಾರೀ ದಾಳಿ
ಅಲ್ಲದೆ, ದಕ್ಷಿಣ ಇಸ್ರೇಲ್‌ನಲ್ಲಿ `ಚೋಟಾ ಇಂಡಿಯಾ’ ಅಂತಲೇ ಕರೆಸಿಕೊಳ್ಳುವ ಡಿಮೋನ್ ಮೇಲೆ ಭಾರಿ ದಾಳಿ ಮಾಡಿದೆ. ಇರಾಕ್‌ನ ಬಾಗ್ದಾದ್ ಮೇಲೆ ಇರಾನ್ ಡ್ರೋನ್ ದಾಳಿ ಮಾಡಿದ್ದು, ಇರಾಕ್‌ನ ಗುಪ್ತಚರ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಇನ್ನು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಮೆರಿಕ ಸಂಬಂಧಿತ ಸ್ಥಳಗಳ ಮೇಲೆ ಇರಾನ್ ದಾಳಿಯಿಂದ ಅಮೆರಿಕಕ್ಕೆ 800 ಮಿಲಿಯನ್ ಡಾಲರ್ ನಷ್ಟವಾಗಿದೆ. ಆದರೆ, 23 ದಿನಗಳಲ್ಲಿ ಇರಾನ್ ಸರ್ವನಾಶ ಮಾಡಿದ್ದೇವೆ ಅಂತ ಅಮೆರಿಕ ಸೇನಾ ಮುಖ್ಯಸ್ಥ ಕೂಪರ್ ಯುದ್ಧದ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಇರಾನ್‌ನ 8 ಸಾವಿರ ಪ್ರದೇಶಗಳ ಮೇಲೆ ದಾಳಿ ಮಾಡಿದ್ದೇವೆ. 130 ಇರಾನಿ ಯುದ್ಧ ನೌಕೆಗಳ ನಾಶ ಮಾಡಿದ್ದೇವೆ. ಇದು 2ನೇ ಮಹಾಯುದ್ದದ ನಂತರ ಅತಿದೊಡ್ಡ ಯುದ್ಧ ನೌಕೆ ನಾಶ ಮಾಡಿರೋದಾಗಿ ಅಮೆರಿಕ ಹೇಳಿದೆ. ಅಲ್ಲದೆ, ಇರಾನ್ ನೂತನ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿ ಬದುಕಿರುವ ಬಗ್ಗೆ ಇರಾನ್‌ಗೆ ಅಮೆರಿಕ ಪ್ರಶ್ನೆ ಮಾಡಿದೆ. ನಿಮ್ಮ ನಾಯಕ ಬದುಕಿದ್ದಾರಾ… ಎಲ್ಲಿದ್ದಾರೆ..? ಅಂತ ಪ್ರಶ್ನಿಸಿದೆ. ಮೊಜ್ತಬಾ ಇಲ್ಲದೇ ಇರಾನ್ ಆಡಳಿತ ನಡೆಸ್ತಿದೆ ಅಂತ ಟ್ರಂಪ್‌ಗೆ ಗುಪ್ತಚರ ಇಲಾಖೆ ಮಾಹಿತಿ ಕೊಟ್ಟಿದೆ ಅಂತ ತಿಳಿದುಬಂದಿದೆ. ಇದನ್ನೂ ಓದಿ: ಕುಟುಂಬಸ್ಥರಿಂದಲೇ ಪಾಕ್‌ನ ಲಷ್ಕರ್‌ ಭಯೋತ್ಪಾದಕ ಬಿಲಾಲ್ ಆರಿಫ್‌ಗೆ ಚಾಕುವಿನಿಂದ ಇರಿದು, ಗುಂಡಿಕ್ಕಿ ಹತ್ಯೆ

Share This Article