ಚಲಿಸುತ್ತಿದ್ದ ಕಾರಿನ ಮುಂದೆಯೇ ಬಿದ್ದ ಬೃಹತ್‌ ಮರ – ಪ್ರಯಾಣಿಕರು ಜಸ್ಟ್‌ ಮಿಸ್‌

1 Min Read

ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ (Car) ಮುಂಭಾಗ ಬೃಹತ್‌ ಮರವೊಂದು ಬಿದ್ದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಆಲ್ದೂರು ಬಳಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

- Advertisement -

ಏ.24ರ ಸಂಜೆ ಆಲ್ದೂರಿನಲ್ಲಿ ಭಾರೀ ಮಳೆ (Rain) ಸುರಿಯುತ್ತಿತ್ತು. ಈ ವೇಳೆ ಕಾರಿನಲ್ಲಿ ಹಾಸನ ಮೂಲದ ನಾಲ್ವರು ಪ್ರಯಾಣಿಸುತ್ತಿದ್ದರು. ಈ ವೇಳೆ ಮರ ಬಿದ್ದಿದೆ. ಮರ ಬೀಳುವ ದೃಶ್ಯ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರಿನ ಹಲವೆಡೆ ಗುಡುಗು ಸಹಿತ ಭಾರೀ ಗಾಳಿ ಮಳೆ

- Advertisement -

- Advertisement -

ಮರ ಬೀಳುತ್ತಿದ್ದಂತೆ ಚಾಲಕ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಲ್ಲಿಸಿದ್ದಾನೆ. ಇದರಿಂದ ಪ್ರಯಾಣಿಕರು ಪಾರಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ

- Advertisement -

Share This Article