ಪತ್ನಿಯ ನಡವಳಿಕೆ ಮೇಲೆ ಸಂಶಯಗೊಂಡು ಚೂಪಾದ ಆಯುಧದಿಂದ ಚುಚ್ಚಿಕೊಂದ ವೃದ್ಧ

Public TV
1 Min Read

ಲಕ್ನೋ: ವೃದ್ಧನೊಬ್ಬ ತನ್ನ ಪತ್ನಿಯ ನಡವಳಿಕೆಯ ಮೇಲೆ ಅನುಮಾನಗೊಂಡು ಅವರನ್ನು ಚೂಪಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಅಸೋಥರ್ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಲಲಿತಾ ದೇವಿ (66) ಕೊಲೆಗೀಡಾದ ವೃದ್ಧೆ. ಶಿವ ಬರನ್ (75) ಕೊಲೆಗೈದ ವೃದ್ಧ. ದಂಪತಿ ಈ ಒಂದು ವಿಚಾರಕ್ಕಾಗಿ ಕಳೆದ 5 ತಿಂಗಳಿಂದ ಜಗಳವಾಡುತ್ತಿದ್ದರು. ಈ ಹಿನ್ನೆಲೆ ಆರೋಪಿಯು ಲಲಿತಾ ಅವರನ್ನು ಕೊಲೆಗೈದಿದ್ದು, ವರಾಂಡಾದಲ್ಲಿ ಗ್ರಾಮಸ್ಥರು ವೃದ್ಧೆಯ ರಕ್ತವನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಗ್ರಾಮಸ್ಥರು ಮಂಚದ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತ್ರಸ್ತೆಯ ಶವವನ್ನು ಕಂಡುಕೊಂಡಿದ್ದಾರೆ. ನಂತರದಲ್ಲಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

ವಿಚಾರಣೆಯ ಸಮಯದಲ್ಲಿ ಆರೋಪಿ ವೃದ್ಧನು ತಪ್ಪೊಪ್ಪಿಕೊಂಡಿದ್ದಾನೆ. ತನಗೆ ಸ್ವಲ್ಪ ಸಮಯದಿಂದ ಲಲಿತಾಳ ನಡುವಳಿಕೆ ಬಗ್ಗೆ ಅನುಮಾನವಿತ್ತು. ಅವಳು ಹೊರಗಡೆ ಹೋದಾಗಲೆಲ್ಲಾ ಒಬ್ಬ ವ್ಯಕ್ತಿ ಜೊತೆ ತಿರುಗುತ್ತಿದ್ದಳು ಎಂದು ಬಹಿರಂಗಪಡಿಸಿದ್ದಾನೆ. ಈ ವಿಷಯದ ಬಗ್ಗೆ ಆಗಾಗ ವೃದ್ಧ ದಂಪತಿಯ ನಡುವೆ ಜಗಳಗಳು ನಡೆಯುತ್ತಿದ್ದವು. ಹಾಗಾಗಿ ಬುಧವಾರ ರಾತ್ರಿ ಲಲಿತಾ ಅವರು ವರಾಂಡಾದಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಕೊಲೆ ಮಾಡಿದ್ದಾನೆ.ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

ಪೊಲೀಸ್ ಅಧೀಕ್ಷಕ (ಎಸ್‍ಪಿ), ರಾಜೇಶ್ ಕುಮಾರ್ ಸಿಂಗ್, ಆರೋಪಿಯು ತನ್ನ ಹೆಂಡತಿಯ ನಡುವಳಿಕೆಯ ಬಗ್ಗೆ ಅನುಮಾನ ಹೊಂದಿದ್ದಕ್ಕಾಗಿ ಹರಿತವಾದ ಆಯುಧದಿಂದ ಕೊಂದಿದ್ದಾನೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *