ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

Public TV
3 Min Read

ಕಾಂಗ್ರೆಸ್ ಸಂಸತ್ ಸದಸ್ಯ ಶಶಿ ತರೂರ್ ನಿನ್ನೆಯಷ್ಟೇ ‘ದಿ ಕಾಶ್ಮೀರ್ ಫೈಲ್ಸ್’ ಕುರಿತಾಗಿ ಟ್ವಿಟ್ ವೊಂದನ್ನು ಮಾಡಿದ್ದರು. ನ್ಯೂಸ್ ಚಾನೆಲ್ ವೊಂದರ ವರದಿಯನ್ನು  ಲಿಂಕ್ ಮಾಡಿ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಸಿಂಗಪುರದ‍ಲ್ಲಿ ಬ್ಯಾನ್ ಮಾಡಲಾಗಿದೆ. ಭಾರತದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಪ್ರಯೋಜಿತ ಸಿನಿಮಾ ದಿ ಕಾಶ್ಮೀರ್ ಫೈಲ್ಸ್’ ಎಂದು ಬರೆದುಕೊಂಡಿದ್ದರು. ಈ ಟ್ವಿಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

ಈ ಟ್ವಿಟ್ ಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿರುವ ಅನುಪಮ್ ಖೇರ್ ತೀವ್ರ ತರಹದಲ್ಲಿ ಪ್ರತಿಕ್ರಿಯೆ ನೀಡಿದ್ದರು. ತರೂರು ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ಅವರು ಈ ಹಿಂದೆ ಟ್ವಿಟ್ ಮಾಡಿದ್ದ ಪೋಸ್ಟ್ ವೊಂದನ್ನು ಟ್ಯಾಗ್ ಮಾಡಿ, ಮಡಿದ ಪತ್ನಿಗೋಸ್ಕರವಾದರೂ ಶಶಿ ತರೂರು, ನಿರ್ಭಾವುಕತೆಯನ್ನು ಬಿಡಬೇಕಿತ್ತು. ತರೂರು ಪತ್ನಿ ಮೂಲತಃ ಕಾಶ್ಮೀರಿ. ಹಾಗಾಗಿ ಈ ಸಿನಿಮಾ ಬಗ್ಗೆ ಸಂವೇದನಾಶೀಲತೆ ತೋರಬೇಕಿತ್ತು ಎಂದು ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವಿಟ್ ಗಳು ಈಗ ಜಟಾಪಟಿಗೆ ಕಾರಣವಾಗಿವೆ.

ಯಾವುದೋ ಒಂದು ದೇಶ ಕಾಶ್ಮೀರ್ ಫೈಲ್ಸ್ ಅನ್ನು ಬ್ಯಾನ್ ಮಾಡಿದೆ ಎಂದ ಮಾತ್ರಕ್ಕೆ ಅದು ಜಗತ್ತಿನ ಗೆಲುವು ಎನ್ನುವಂತೆ ತರೂರು ಸಂಭ್ರಮಿಸುತ್ತಿದ್ದಾರೆ. ಇದು ದುರಂತ ಎನ್ನುವ ಅರ್ಥದಲ್ಲಿ ಅನುಪಮ್ ಖೇರ್ ಬರೆದುಕೊಂಡಿದ್ದಕ್ಕೆ, ಶಶಿ ತರೂರು ಕೂಡ ಅಷ್ಟೇ ಖಾರವಾಗಿಯೇ ಮತ್ತೊಂದು ಟ್ವಿಟ್ ಮಾಡಿದ್ದಾರೆ. ವಿನಾಕಾರಣ ನನ್ನ ದಿವಗಂತ ಪತ್ನಿಯನ್ನು ಎಳೆದು ತಂದಿರುವುದು ಅವರ ನಿರ್ಲಜ್ಜೆತನ ತೋರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ಯಾವುದೇ ಕಾಮೆಂಟ್ ಸೇರಿಸದೆ, ವರದಿಯಾದ ಸುದ್ದಿಯನ್ನು ಮಾತ್ರ ಪೋಸ್ಟ್ ಮಾಡಿದ್ದೇನೆ ಎಂದು ಸಮಜಾಯಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ತಮ್ಮ ದಿವಗಂತ ಪತ್ನಿಯ ಊರಿಗೂ ಹೋಗಿದ್ದ ವಿಷಯವನ್ನೂ ಪ್ರಸ್ತಾಪಿಸಿರುವ ತರೂರು, ಸುನಂದಾ ಮನೆಯ ಅಕ್ಕಪಕ್ಕದವರನ್ನು ಮಾತನಾಡಿಸಿದ್ದೆ. ಅಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿಯೇ ಇದ್ದರು. ಈಗ ಏನೇ ಹೇಳಿದರೂ, ನನ್ನ ಮಾತುಗಳನ್ನು ಅನುಮೋದಿಸುವುದಕ್ಕೆ ಸುನಂದಾ ಇಲ್ಲವೆಂದೂ ಅವರು ಮತ್ತೊಂದು ಫೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಅನುಪಮ್ ಖೇರ್ ಮತ್ತು ತರೂರ್ ಟ್ವಿಟ್ ಗಳು ಈಗ ಭಾರೀ ಸದ್ದು ಮಾಡುತ್ತಿವೆ. ದಿ ಕಾಶ್ಮೀರ್ ಫೈಲ್ಸ್ ಕುರಿತು ಹೆಮ್ಮೆಯಿಂದ ಅನುಪಮ್ ಖೇರ್ ಮಾತನಾಡುತ್ತಿದ್ದರೆ, ಶಶಿ ತರೂರು ಸಿನಿಮಾ ಬಗ್ಗೆ ಕಾಮೆಂಟ್ ಮಾಡದೇ ಸುದ್ದಿಯನ್ನು ಮಾತ್ರ ಪೋಸ್ಟ್ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ಅದೊಂದು ಆಡಳಿತ ಸರಕಾರದ  ಕೃಪಾಪೋಷಿತ ಸಿನಿಮಾ ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ಕಟುಸತ್ಯ ಎಂದೂ ಹೇಳಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ಸಿಂಗಪೂರ ಸಿನಿಮಾ ಕಾನೂನಿನ ಅಂಶಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾರದೇ ಇರುವ ಕಾರಣಕ್ಕಾಗಿ ಸಿಂಗಾಪೂರದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಇದೊಂದು ಹಿಂಸೆಯನ್ನು ಪ್ರಚೋದಿಸುವಂತಹ ಸಿನಿಮಾವಾಗಿದ್ದರಿಂದ ಪ್ರದರ್ಶನಕ್ಕೆ ಯೋಗ್ಯವಾಗಿಲ್ಲ ಎಂದು ಅಲ್ಲಿ ಪ್ರಸಾರ ಖಾತೆಯು ತಿಳಿಸಿದೆ ಎಂದು ಸುದ್ದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *