ಶತಕ ಸಿಡಿಸಿ ಆಫ್ರಿಕಾಗೆ ಪಂಚ್ ನೀಡಿದ ಪಂತ್ – ಭಾರತದ ಗೆಲುವಿಗೆ ಬೇಕಿದೆ 8 ವಿಕೆಟ್

Public TV
1 Min Read

ಕೇಪ್‍ಟೌನ್: ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ ಕೆಚ್ಚೆದೆಯ ಹೋರಾಟ ನಡೆಸಿ ಭರ್ಜರಿ ಶತಕದ ಹೊರತಾಗಿಯೂ ಟೀಂ ಇಂಡಿಯಾ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ 198 ರನ್‍ಗಳಿಗೆ ಆಲೌಟ್ ಆಗಿ ದಕ್ಷಿಣ ಆಫ್ರಿಕಾಗೆ ಒಟ್ಟು 212 ರನ್ ಟಾರ್ಗೆಟ್ ನೀಡಿದೆ.

ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 29.4 ಓವರ್‌ಗಳಲ್ಲಿ 101 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದು, ಇನ್ನೂ ಗೆಲುವಿಗೆ 111 ರನ್ ಬೇಕಿದೆ, ಇತ್ತ ಭಾರತದ ಗೆಲುವಿಗೆ 8 ವಿಕೆಟ್‍ಗಳ ಅವಶ್ಯಕತೆ ಇದೆ. ಇದನ್ನೂ ಓದಿ: ಸಖತ್ ಸದ್ದು ಮಾಡುತ್ತಿದೆ ಜಡ್ಡುವಿನ ಪುಷ್ಟ ಲುಕ್

ಮೂರನೇ ದಿನದಾಟದಲ್ಲಿ ಭಾರತದ ಪರ ವಿರಾಟ್ ಕೊಹ್ಲಿ 29 ರನ್ (143 ಎಸೆತ, 4 ಬೌಂಡರಿ) ಸಿಡಿಸಿ ಪಂತ್‍ಗೆ ಸಾಥ್ ನೀಡಿದನ್ನು ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‍ಮ್ಯಾನ್ ಕೂಡ ರನ್ ಕಲೆಹಾಕಲು ಪ್ರಯತ್ನಿಸಲಿಲ್ಲ. 6 ಜನ ಆಟಗಾರರು ಒಂದಂಕ್ಕಿ ಮೊತ್ತ ಕಲೆಹಾಕಿದರೆ, ಇಬ್ಬರು ಶೂನ್ಯ ಸುತ್ತಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಕೂಡ ಮನಬಂದಂತೆ ಬ್ಯಾಟ್‍ಬೀಸಿದ ಪಂತ್ ಅಜೇಯ 100 ರನ್ (139 ಎಸೆತ, 6 ಬೌಂಡರಿ, 4 ಸಿಕ್ಸ್) ಬಾರಿಸಿ ಭರ್ಜರಿ ಪ್ರದರ್ಶನ ನೀಡಿದರು. ಇದನ್ನೂ ಓದಿ: ಫೀಲ್ಡಿಂಗ್‍ನಲ್ಲಿ ವಿರಾಟ್ ಕೊಹ್ಲಿ ಶತಕ

ಇತ್ತ ಭಾರತದ ಬೃಹತ್ ಮೊತ್ತಕ್ಕೆ ತಣ್ಣೀರೆರಚಿದ ಮಾರ್ಕೊ ಜಾನ್ಸೆನ್ 4 ವಿಕೆಟ್ ಕಿತ್ತು ಮಿಂಚಿದರು. ಕಗಿಸೊ ರಬಾಡ ಮತ್ತು ಲುಂಗಿ ಎನ್‍ಗಿಡಿ ತಲಾ 3 ವಿಕೆಟ್ ಹಂಚಿಕೊಂಡರು.

212 ರನ್‍ಗಳ ಟಾರ್ಗೆಟ್ ಬೆನ್ನು ಹತ್ತಿದ ಆಫ್ರಿಕಾ ಆರಂಭದಲ್ಲೇ ಮಕ್ರಾರ್ಮ್ 16 ರನ್ (22 ಎಸೆತ, 4 ಬೌಂಡರಿ) ವಿಕೆಟ್ ಕಳೆದುಕೊಂಡಿತು. ಬಳಿಕ ಅಂತಿಮ ಕ್ಷಣದಲ್ಲಿ ಡೀನ್ ಎಲ್ಗರ್ 30 ರನ್ (96 ಎಸೆತ, 7 ಬೌಂಡರಿ) ಸಿಡಿಸಿ ಔಟ್ ಆದರು. ದಿನದಾಟದ ಅಂತ್ಯಕ್ಕೆ ಆಫ್ರಿಕಾ 29.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 101 ರನ್ ಬಾರಿಸಿದ್ದು, ಇನ್ನೂ 111 ರನ್‍ಗಳ ಗುರಿ ನಾಲ್ಕನೇ ದಿನದಾಟದಲ್ಲಿ ಪಡೆದುಕೊಂಡಿದೆ. ಇದನ್ನೂ ಓದಿ: ಹರಾಜಿಗೂ ಮುನ್ನ 3 ಆಟಗಾರರನ್ನು ಆಯ್ಕೆ ಮಾಡಿ: ಲಕ್ನೋ, ಅಹಮದಾಬಾದ್‍ಗೆ ಡೆಡ್‍ಲೈನ್

Share This Article
Leave a Comment

Leave a Reply

Your email address will not be published. Required fields are marked *