– ವೀಡಿಯೋ ಕರೆ ಮೂಲಕ ಯೋಗಕ್ಷೇಮ ವಿಚಾರಣೆ
ನವದೆಹಲಿ: ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ಆಟಗಾರ ಪ್ರಿಯಾಂಶ್ ಆರ್ಯ (Priyansh Arya) ಬಾರಿಸಿದ ಸಿಕ್ಸರ್‌ನಿಂದ ಗಾಯಗೊಂಡಿದ್ದ ಅಭಿಮಾನಿಯನ್ನು ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ (Preity Zinta) ಹಾಗೂ ತಂಡ ವೀಡಿಯೋ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದೆ. ಅಲ್ಲದೇ ಮುಂದಿನ ಪಂದ್ಯಕ್ಕೆ ತಪ್ಪದೇ ಬರುವಂತೆ ಆಹ್ವಾನಿಸಿದೆ.
ಈ ಕುರಿತ ವೀಡಿಯೋವನ್ನು ಪಂಜಾಬ್ ಕಿಂಗ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ವೀಡಿಯೋದಲ್ಲಿ ಪ್ರೀತಿ ಜಿಂಟಾ ಹಾಗೂ ಪ್ರಿಯಾಂಶ್ ಆರ್ಯ ಅಭಿಮಾನಿ ಕ್ರಿಶನ್ ಚಂದ್ ಅವರೊಂದಿಗೆ ಮಾತುಕತೆ ನಡೆಸಿ ಕ್ಷಮೆಯಾಚಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ.
The fans come first, always ❤️
Wishing Krishan Chand ji a speedy recovery. Glad to see him doing better 🙌 pic.twitter.com/b1trjoyMXC
— Punjab Kings (@PunjabKingsIPL) May 2, 2026
ಮುಂದಿನ ಪಂದ್ಯಕ್ಕೆ ಅತಿಥಿಯಾಗಿ ಬರುವಂತೆ ಅಭಿಮಾನಿಯನ್ನು ಪ್ರೀತಿ ಜಿಂಟಾ ಆಹ್ವಾನಿಸಿದ್ದು, ವಿವಿಐಪಿ ಗ್ಯಾಲರಿಯಲ್ಲಿ ಕುಳಿತು ಪಂದ್ಯ ನೋಡಲು ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಅಲ್ಲದೇ ಅಭಿಮಾನಿಗೆ ಹೆಲ್ಮೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

