ನಮ್ಮಲ್ಲಿ ಸಿನಿ ತಾರೆಯರು ರಾಜಕಾರಣಕ್ಕೆ ಬರುವುದು ಸಹಜ. ಈಗಲೂ ಸಹ ಹಲವಾರು ಮಂದಿ ಸಿನಿಮಾ ತಾರೆಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ ರಾಜಕಾರಣಿಗಳು ಸಹ ತಮ್ಮ ಪಕ್ಷದ ಪ್ರಚಾರಕ್ಕೆ, ಪಕ್ಷದ ನೀತಿಗಳ ಪ್ರಚಾರಕ್ಕೆ ದಶಕಗಳಿಂದಲೂ ಸಿನಿಮಾಗಳನ್ನು ಬಳಸಿಕೊಂಡೇ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ, ಜನಪ್ರಿಯ ನಟ-ನಟಿಯರು ರಾಜಕಾರಣಿಗಳ ಭೇಟಿ ಆಗುವುದು ಸಾಮಾನ್ಯ ಮತ್ತು ಕುತೂಹಲಕಾರಿಯೂ ಹೌದು.
Had the honour of meeting the Honourable Home Minister, Shri @AmitShah ji. It became one of my most memorable moments as he shared his words of appreciation for Kantara and Kantara Chapter 1. I also had a wonderful time discussing my upcoming projects with him. I must say, I was… pic.twitter.com/RtvyjRGEZF
— Rishab Shetty (@shetty_rishab) May 2, 2026
ಇದೀಗ ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿ ಆಗಿದ್ದಾರೆ. ಇವರಿಬ್ಬರ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ಈ ಭೇಟಿಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಡಿವೈನ್ ಸ್ಟಾರ್, ಗೌರವಾನ್ವಿತ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುವ ಸೌಭಾಗ್ಯ ನನ್ನದಾಯ್ತು. ʻಕಾಂತಾರʼ ಮತ್ತು ʻಕಾಂತಾರ-1ʼ ಚಿತ್ರದ ಕುರಿತು ಅವರು ತಮ್ಮ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡರು ಎಂದು ಹೇಳಿರುವ ರಿಷಬ್ ಈ ಭೇಟಿ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ನನ್ನ ಮುಂದಿನ ಚಿತ್ರಗಳ ಕುರಿತು ಕೂಡ ಅವರು ಕೇಳಿ ಮಾಹಿತಿ ಪಡೆದರಲ್ಲದೇ, ನಮ್ಮ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಚಲನಚಿತ್ರ ನಿರ್ಮಾಣದ ಬಗ್ಗೆ ಆಳವಾದ ಜ್ಞಾನ ಮತ್ತು ತಿಳುವಳಿಕೆಯನ್ನು ಹೊಂದಿದ್ದಾರೆ. ಈ ಬಗ್ಗೆ ಚರ್ಚಿಸಿದ್ದು ಬಹಳ ಸಂತೋಷವಾಯ್ತು ಎಂದು ಬರೆದಕೊಂಡಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಮತ್ತು ಅಮಿತ್ ಶಾ ಅವರ ಈ ಭೇಟಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪಂಚರಾಜ್ಯ ಚುನಾವಣೆಯ ಫಲಿತಾಂಶ ಬೇರೆ ಬರಬೇಕಿರುವ ಹಿನ್ನೆಲೆ ಹಲವರು ಈ ಭೇಟಿಯ ವಿಚಾರವನ್ನ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ಧಾರೆ.
2023 ರಲ್ಲಿ ಪ್ರಧಾನಿ ಮೋದಿ ಅವರನ್ನು ಕೂಡ ರಿಷಬ್ ಭೇಟಿಯಾಗಿದ್ದರು. ಅಂದು ಕೂಡ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಮೋದಿ ಅವರು ಮಹಾನ್ ನಾಯಕ ಎಂದು ಬಣ್ಣಿಸಿದ್ದರು.
ಇನ್ನುಳಿದಂತೆ 2023ರಲ್ಲಿಯೇ ರಾಜಕೀಯ ಪ್ರವೇಶದ ಕುರಿತ ಸುದ್ದಿಗೆ ಪ್ರತಿಕ್ರಿಯಿಸಿದ್ದ ರಿಷಬ್ ಶೆಟ್ಟಿ, ನನ್ನ ರಾಜಕೀಯ ಪ್ರವೇಶದ ಕುರಿತು ಸುದ್ದಿ ಸುಳ್ಳು ಎಂದಿದ್ದರು. ಕಾಂತಾರ ಚಾಪ್ಟರ್ -1 ಸಕ್ಸಸ್ ಕಂಡ ಬಳಿಕ 3ನೇ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂದು ಮೂಲಗಳುತಿಳಿಸಿವೆ.

