ಮದುವೆ ಸಾಲ ತೀರಿಸಲು ಮಗಳ ಮನೆಗೆ ತಾಯಿ ಕನ್ನ – 16.57 ಲಕ್ಷ ಮೌಲ್ಯದ 110 ಗ್ರಾಂ ಚಿನ್ನ ಕಳ್ಳತನ

1 Min Read

ಬೆಳಗಾವಿ: ಮದುವೆ ಸಾಲ (Marriage Debt) ತೀರಿಸಲು ಮಗಳ (Daughter) ಮನೆಗೆ ತಾಯಿಯೇ ಕನ್ನ ಹಾಕಿ ಸಿಕ್ಕಿಬಿದ್ದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

ಬೆಳಗಾವಿಯ ಪಿರಣವಾಡಿ ನಿವಾಸಿ ಉಜ್ವಲಾ ಕಮ್ಮಾರ ಪುತ್ರಿಯರ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಯಲ್ಲಿ ಕಳ್ಳತನ (Theft) ಮಾಡಿದ್ದಾಳೆ. ಮಗಳು – ಅಳಿಯ ಸ್ನೇಹಿತರ ಮದುವೆಗೆಂದು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಮನೆಯಲ್ಲಿದ್ದ ಪುತ್ರಿಯ ಚಿನ್ನದ ಬಳೆ, ಉಂಗುರ, ನೆಕ್ಲೆಸ್, ಗಂಟನ್ ಸೇರಿ 16.57 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನಾಭರಣವನ್ನು ಉಜ್ವಲಾ ಎಗರಿಸಿದ್ದಾಳೆ. ಮದುವೆ ಮುಗಿಸಿ ಮನೆಗೆ ಬಂದು ನೋಡಿದಾಗ ಚಿನ್ನಾಭರಣ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ನಿಸ್ವಾರ್ಥ ಸೇವೆ ಸಲ್ಲಿಸಿದ ವೈದ್ಯರು, ಶವಾಗಾರ ಸಿಬ್ಬಂದಿಗೆ ಸನ್ಮಾನ

ಚಿನ್ನಾಭರಣ ಕಳ್ಳತನ ಆದ ಬಗ್ಗೆ ಅತ್ತೆಯನ್ನು ವಿಚಾರಿಸಿದಾಗ ಐನಾತಿ ಅತ್ತೆ ನನಗೆ ಗೊತ್ತಿಲ್ಲ ಎಂದಿದ್ದಾಳೆ. ಕಳ್ಳತನ ಸಂಬಂಧ ಟಿಳಕವಾಡಿ ಠಾಣೆ ಪೊಲೀಸರಿಗೆ ಅಳಿಯ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಾಗ ಪೊಲೀಸರ ಎದುರು ಅತ್ತೆಯ ಹೈಡ್ರಾಮಾ ಬೆಳಿಕಿಗೆ ಬಂದಿದೆ. ತೀವ್ರ ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಕಳ್ಳಿ ಅತ್ತೆ ಬಾಯ್ಬಿಟ್ಟಿದ್ದಾಳೆ. ತಕ್ಷಣವೇ ಅತ್ತೆ ಉಜ್ವಲ ಹಾಗೂ ಸಂಬಂಧಿ ಶಿವಾ ಬಳಿಯಿದ್ದ ಚಿನ್ನಾಭರಣ ವಶಪಡಿಸಿಕೊಂಡು ಪೊಲೀಸರು ಅತ್ತೆಯನ್ನು ಬಂಧಿಸಿದ್ದಾರೆ. ಸದ್ಯ ಟಿಳಕವಾಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಂಬೈ ಕುಟುಂಬದ ಸಾವಿಗೆ ಕಲ್ಲಂಗಡಿ ಕಾರಣವಲ್ಲ – ಮೃತರ ದೇಹದಲ್ಲಿ ಮಾರ್ಫಿನ್ ಅಂಶ ಪತ್ತೆ

Share This Article