ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು – ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

2 Min Read

– ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಸಿಎಂ ಸೂಚನೆ
– ತನಿಖೆ ನಡೆಸಿ ವರದಿ ಕೊಡುವಂತೆ ಸೂಚನೆ

ಬೆಂಗಳೂರು: ಕಾದು ಕೆಂಡವಾಗಿದ್ದ ಬೆಂಗಳೂರಿನಲ್ಲಿ (Bengaluru) ಮಳೆಯಾಯಿತು ಎಂದು ಜನ ಹರ್ಷಗೊಂಡಿದ್ದಾಗಲೇ ದುರಂತವೊಂದು ನಡೆದುಹೋಗಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಆವರಣದಲ್ಲಿ ಗೋಡೆ ಕುಸಿದು (Bowring Hospital Wall Collapse) 7 ಮಂದಿ ಸಾವನ್ನಪಿದ್ದು, ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಧಾವಿಸಿದ್ದಾರೆ.

ಇಂದು ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಜಿಬಿಎ ಅಧಿಕಾರಿಗಳನ್ನ ತರಾಟೆಗೆ ತೆಗದುಕೊಂಡಿದ್ದಾರೆ. ಗೋಡೆಯನ್ನ ಯಾವಾಗ ಕಟ್ಟಿದ್ದು? ಯಾವಾಗ ಪ್ಲ್ಯಾನ್‌ ಮಾಡಿದ್ದು? ಹಳೆಯದ್ದು ಅಂತ ಗೊತ್ತಿಲ್ಲಾ? ಚೀಫ್‌ ಇಂಜಿನಿಯರ್‌ ಯಾರು? ಗೋಡೆ ಹಳೆಯದ್ದು ಅಂತ ಪರಿಶೀಲನೆ ನಡೆಸಿಲ್ವಾ? ಅಂತಾ ತರಾಟೆಗೆ ತೆಗದುಕೊಂಡಿದ್ದಾರೆ. ಬಳಿಕ ಬೌರಿಂಗ್‌ ಆಸ್ಪತ್ರೆಗೆ ತೆರಳಿ ಗಾಯಾಳುಗಳು ಆರೋಗ್ಯ ವಿಚಾರಿಸಿದ ಸಿಎಂ ಉಚಿತ ಚಿಕಿತ್ಸೆ ನೀಡುವಂತೆ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿತ, ಸಾವಿನ ಸಂಖ್ಯೆ 8ಕ್ಕೆ ಏರಿಕೆ

ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
ಬಳಿಕ ಮಾಧ್ಯಗಳೊಂದಿಗೆ ಮಾತನಾಡಿದ ಸಿಎಂ, ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 7 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರು ಸ್ಟೇಬಲ್‌ ಆಗಿ ಇದ್ದಾರೆ, ಎಲ್ಲರಿಗೂ ಉಚಿತ ಚಿಕಿತ್ಸೆ ಕೊಡಲು ಹೇಳಿದ್ದೇನೆ ಎಂದರಲ್ಲದೇ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: Bengaluru Rain | ಬೆಂಗಳೂರಲ್ಲಿ ಆಲಿಕಲ್ಲು ಮಳೆ, ಗಾಳಿ ಅಬ್ಬರ – ವಿಧಾನಸೌಧಕ್ಕೂ ನುಗ್ಗಿದ ನೀರು

ಜೊತೆಗೆ ಕಾಂಪೌಂಡ್‌ ಯಾಕೆ ಬಿದ್ದಿದೆ ಅನ್ನೋದನ್ನ ತನಿಖೆ ಮಾಡಿಸ್ತೀನಿ. ಘಟನೆಗೆ ಯಾರು ಜವಾಬ್ದಾರರು? ಫುಟ್‌ಪಾತ್‌ ಉದ್ದಕ್ಕೂ ಬೀದಿ ವ್ಯಾಪಾರಿಗಳು ಇದ್ದಾರೆ, ಗೋಡೆ ಶಿಥಿಲ ಗೊಂಡಿತ್ತಾ? ಭದ್ರತಾ ದೃಷ್ಟಿಯಿಂದ ಸರಿಯಾಗಿತ್ತಾ? ಇಂಜಿನಿಯರ್‌ಗಳದ್ದು ತಪ್ಪಿತ್ತಾ ಅನ್ನೋದನ್ನ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂಜಿನಿಯರ್‌ಗಳದ್ದು ತಪ್ಪಿದ್ದರೆ ಕ್ರಮ ವಹಿಸುತ್ತೇನೆ? ಎಂದಿದ್ದಾರೆ.

ಘಟನಾ ಸ್ಥಳದಲ್ಲಿ ಬೀದಿ ಬದಿ ವ್ಯಾಪಾರಿಗಳಿದ್ದರು, ಎಲ್ಲರೂ ಬಡವರಿದ್ದಾರೆ. ಈ ಪ್ರಮಾಣದಲ್ಲಿ ಮಳೆ ಆಗುತ್ತೆ ಅಂತ ಗೊತ್ತಿರಲಿಲ್ಲ. ಅದೇ ಜಾಗದಲ್ಲಿ ಬೌರಿಂಗ್‌ ಆಸ್ಪತ್ರೆ ಕೆಲಸ ಕೂಡ ನಡೆಯುತ್ತಿತ್ತು, ಮಣ್ಣನ್ನ ಅಲ್ಲೇ ಸುರಿಯುತ್ತಿದ್ದರು. ಅದರ ಒತ್ತಡಕ್ಕೆ ಬಿದ್ದಿರಬಹುದು ಅಂತ ನಾನಂದುಕೊಂಡಿದ್ದೇನೆ. ಎಲ್ಲವನ್ನ ಪರಿಶೀಲಿಸಿ, ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಮಳೆ ಮುನ್ಸೂಚನೆ – ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Share This Article