ಚೆನ್ನೈ: ಹೊಸ ಪಕ್ಷ ಕಟ್ಟಿ ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಫಲಿತಾಂಶದಲ್ಲಿ ಮ್ಯಾಜಿಕ್ ಮಾಡಿದ್ದಾರೆ. ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ಪಟ್ಟಕೇರುವ ಸಾಧ್ಯತೆಗಳಿವೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.
ಬಹುತೇಕ ಸಮೀಕ್ಷೆಗಳು ಡಿಎಂಕೆಗೆ ಬಹುಮತ ನೀಡಿದ್ದರೆ, ಆಕ್ಸಿಸ್ ಮೈ ಇಂಡಿಯಾ (Axis my India) ಸಮೀಕ್ಷೆ ಮಾತ್ರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬಹುಮತ ನೀಡಿದೆ. ಡಿಎಂಕೆ 92 ರಿಂದ 110 ಸ್ಥಾನಗಳು, ಎಐಎಡಿಎಂಕೆ 22 ರಿಂದ 32 ಸ್ಥಾನಗಳನ್ನ ಗಳಿಸಿದ್ರೆ, ಟಿವಿಕೆ ಪಕ್ಷ 98 ರಿಂದ 120 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದೆ.

ಸಾಮಾನ್ಯವಾಗಿ ಒಮ್ಮೆ ಅಧಿಕಾರ ಕೊಡುವ ತಮಿಳುನಾಡಿನ ಮತದಾರ, ಮತ್ತೊಂದು ಅವಧಿಗೆ ಅದೇ ಮೈತ್ರಿಕೂಟಕ್ಕೆ ಅಧಿಕಾರ ಕೊಡುವುದಿಲ್ಲ. ಹಾಗಾಗಿ ಈ ಬಾರಿಯೂ ಡಿಎಂಕೆ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುತ್ತಾ? ಒಂದು ವೇಳೆ ಸಮೀಕ್ಷೆ ಸುಳ್ಳಾದರೂ ವೋಟ್ ಶೇರ್ನಲ್ಲಿ ವಿಜಯ್ ಮ್ಯಾಜಿಕ್ ಮಾಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
ಒಂದೇ ಹಂತದಲ್ಲಿ ನಡೆದಿದ್ದ ಚುನಾವಣೆ
ತಮಿಳುನಾಡಿನ 234 ಕ್ಷೇತ್ರಗಳಿಗೆ ಈ ಬಾರಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಶೇ. 86ರಷ್ಟು ಮತದಾನವಾಗಿತ್ತು, ಇದು ಕೂಡಾ ಇತ್ತೀಚಿನ ವರ್ಷಗಳಲ್ಲಿ ದಾಖಲೆಯ ಮತದಾನವಾಗಿತ್ತು. ಜನಪ್ರಿಯ ನಟ ದಳಪತಿ ವಿಜಯ್ ಅವರ ಪಾರ್ಟಿ ಟಿವಿಕೆ, ಮೊದಲ ಬಾರಿಗೆ ಚುನಾವಣಾ ಆಖಾಡಕ್ಕೆ ಇಳಿದಿರುವ ಹಿನ್ನಲೆಯಲ್ಲಿ ಈ ಬಾರಿಯ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. 2021ರಲ್ಲಿ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ ಎಲ್ಲಾ ಸರ್ವೇಗಳು, ಡಿಎಂಕೆ ಮೈತ್ರಿಕೂಟಕ್ಕೆ ಬಹುಮತ ಎಂದು ಹೇಳಿತ್ತು. ಅದರಂತೆ ಚುನಾವಣಾ ಫಲಿತಾಂಶವೂ ನಿಜವಾಗಿತ್ತು.

ತಮಿಳುನಾಡು 2021 ರ ಫಲಿತಾಂಶ
ಒಟ್ಟು ಕ್ಷೇತ್ರ – 234
ಬಹುಮತಕ್ಕೆ – 118
ಡಿಎಂಕೆ – 133
ಕಾಂಗ್ರೆಸ್ – 18
ವಿಸಿಕೆ – 4
ಸಿಪಿಐ – 2
ಸಿಪಿಐ(ಎಂ) – 2
ಡಿಎಂಕೆ ಮೈತ್ರಿ ಒಟ್ಟು – 159
ಎನ್ಡಿಎ
ಎಐಎಡಿಎಂಕೆ – 66
ಬಿಜೆಪಿ – 4
ಪಿಎಂಕೆ – 5
ಎನ್ಡಿಎ ಮೈತ್ರಿ ಒಟ್ಟು – 75

