– ಜೈಸ್ವಾಲ್, ಫೆರೀರಾ, ವೈಭವ್ ಸ್ಫೋಟಕ ಬ್ಯಾಟಿಂಗ್‌ಗೆ ಒಲಿದ ಗೆಲುವು
ಚಂಡೀಗಢ: ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಗೆಲುವಿನ ಓಟಕ್ಕೆ ರಾಜಸ್ಥಾನ್ ರಾಯಲ್ಸ್ ಬ್ರೇಕ್ ಹಾಕಿದೆ. ಜೈಸ್ವಾಲ್, ಫೆರೀರಾ, ವೈಭವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಪಂಜಾಬ್ ವಿರುದ್ಧ ರಾಜಸ್ಥಾನ್ 6 ವಿಕೆಟ್‌ಗಳ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ (Punjab Kings) ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ (Rajastha Royals) ತಂಡ ಇನ್ನೂ 4 ಎಸೆತ ಬಾಕಿಯಿರುವಾಗಲೇ 4 ವಿಕೆಟ್ ನಷ್ಟಕ್ಕೆ 228 ರನ್‌ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ.
ಚೇಸಿಂಗ್ ಶುರು ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಆರಂಭದಲ್ಲೇ ಸಿಕ್ಸ್, ಬೌಂಡರಿಗಳ ಸುರಿಮಳೆ ಸುರಿಸಿದರು. 3.2 ಓವರ್‌ನಲ್ಲಿ ಅರ್ಶ್‌ದೀಪ್ ಎಸೆತಕ್ಕೆ ಬ್ಯಾಟ್ ಬೀಸಿದ ವೈಭವ್ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿದರು. ವೈಭವ್ ಔಟಾದ ಬೆನ್ನಲ್ಲೇ ಉತ್ತಮ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಡೊನೆವನ್ ಫೆರೀರಾ ಹಾಗೂ ಶುಭಂ ದುಬೆ 32 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟವಾಡಿ ಗೆಲುವಿಗೆ ಸಹಕಾರಿಯಾದರು.
ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸ್ ಬಾರಿಸಿ 51 ರನ್‌ಗಳಿಸಿದರು. ವೈಭವ್ ಸೂರ್ಯವಂಶಿ 16 ಎಸೆತಗಳಲ್ಲಿ 5 ಸಿಕ್ಸ್, 3 ಬೌಂಡರಿ ಹೊಡೆದು 43 ರನ್ ಬಾರಿಸಿದರು. ಧ್ರುವ್ ಜುರೆಲ್ 20 ಎಸೆತಗಳಲ್ಲಿ 16 ರನ್, ರಿಯಾನ್ ಪರಾಗ್ 16 ಎಸೆತಗಳಲ್ಲಿ 29 ರನ್, ಡೊನೆವನ್ ಫೆರೀರಾ 26 ಎಸೆತಗಳಲ್ಲಿ 52 ರನ್, ಶುಭಂ ದುಬೆ ಎಸೆತಗಳಲ್ಲಿ 31 ರನ್ ಬಾರಿಸಿದರು.
ಪಂಜಾಬ್ ಪರ ಬೌಲಿಂಗ್ ಮಾಡಿದ ಯುಜುವೇಂದ್ರ ಚಾಹಲ್ 3 ವಿಕೆಟ್ ಹಾಗೂ ಅರ್ಶ್‌ದೀಪ್ ಸಿಂಗ್ 1 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್‌ನ ಪ್ರಭಸಿಮ್ರಾನ್ ಹಾಗೂ ಪ್ರಿಯಾಂಶ್ ಆರ್ಯ ಉತ್ತಮ ಆರಂಭವನ್ನೇ ನೀಡಿದರು. ಆದರೆ 2.5 ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆದರೂ ಬಗ್ಗದ ಪಂಜಾಬ್ ಆಟವನ್ನು ಮುಂದುವರಿಸಿ, ಕೊನೋಲಿ ಹಾಗೂ ಪ್ರಭಸಿಮ್ರಾನ್ ಬರೋಬ್ಬರಿ 33 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟವಾಡಿದರು. 96 ರನ್ ಇದ್ದಾಗ ಪಂಜಾಬ್ ಎರಡನೇ ವಿಕೆಟ್ ಕಳೆದುಕೊಂಡಿತು. ಕೂಪರ್ ಕೊನೋಲಿ ಪೆವಿಲಿಯನ್‌ಗೆ ಮರಳಿದರು. ಆನಂತರ ಕ್ರೀಸ್‌ಗೆ ಬಂದ ಸ್ಟೊಯಿನಿಸ್ ರಾಜಸ್ಥಾನ ಮನಬಂದಂತೆ ಬೌಲರ್‌ಗಳನ್ನು ದಂಡಿಸಿದರು.
ಪ್ರಭಸಿಮ್ರಾನ್ 44 ಎಸೆಗಳಲ್ಲಿ 59 ರನ್, ಪ್ರಿಯಾಂಶ್ ಆರ್ಯ 11 ಎಸೆತಗಳಲ್ಲಿ 29 ರನ್, ಕೂಪರ್ ಕೊನೋಲಿ 14 ಎಸೆತಗಳಲ್ಲಿ 30 ರನ್, ಶ್ರೇಯಸ್ ಆಯ್ಯರ್ 27 ಎಸೆತಗಳಲ್ಲಿ 30 ರನ್, ಮಾರ್ಕಸ್ ಸ್ಟೊಯಿನಿಸ್ 22 ಎಸೆತಗಳಲ್ಲಿ 62 ರನ್‌ಗಳಿಸಿದರು.
ರಾಜಸ್ಥಾನ್ ಪರ ಬೌಲಿಂಗ್ ಮಾಡಿದ ಯಶ್ ರಾಜ್ ಪುಂಜಾ 2 ವಿಕೆಟ್ ಕಿತ್ತರು. ಜೋಫ್ರಾ ಆರ್ಚರ್ ಹಾಗೂ ಬರ್ಗರ್ ತಲಾ ವಿಕೆಟ್ ಪಡೆದುಕೊಂಡರು.

