ಕನ್ನಡಿಗ ಕೆಎಲ್‌ ರಾಹುಲ್‌ ರೆಕಾರ್ಡ್‌ ಆಟ ವ್ಯರ್ಥ – ಡೆಲ್ಲಿ ವಿರುದ್ಧ ಪಂಜಾಬ್‌ಗೆ 6 ವಿಕೆಟ್‌ಗಳ ಜಯ

0 Min Read

ನವದೆಹಲಿ: ಶ್ರೇಯಸ್‌ ಅಯ್ಯರ್‌, ಪ್ರಭುಸಿಮ್ರಾನ್‌ ಅಬ್ಬರದ ಆಟಕ್ಕೆ ಪಂಜಾಬ್‌ ಕಿಂಗ್ಸ್‌ (Punjab Kings) ತಂಡ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಭರ್ಜರಿ 264 ರನ್‌ ಗಳಿಸಿತು. ಸವಾಲಿನ ಮೊತ್ತ‌ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ 18.5 ಓವರ್‌ನಲ್ಲಿಯೇ 265 ರನ್‌ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ. ಇದನ್ನೂ ಓದಿ:ಕ್ಯಾಚ್‌ ಹಿಡಿಯುವಾಗ ಕೆಳಗೆ ಬಿದ್ದ ಲುಂಗಿ ಎನ್‌ಗಿಡಿ ತಲೆಗೆ ತೀವ್ರ ಪೆಟ್ಟು – ಮೈದಾನಕ್ಕೆ ಬಂತು ಅಂಬುಲೆನ್ಸ್‌

ಡೆಲ್ಲಿ ನೀಡಿದ ಬೃಹತ್‌ ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್‌ ಆರಂಭದಲ್ಲೇ ಹೊಡಿಬಡಿ ಆಟವಾಡಿತು. ಪ್ರಭುಸಿಮ್ರಾನ್‌ ಸಿಂಗ್‌ ಹಾಗೂ ಪ್ರಿಯಾಂಶ್‌ ಆರ್ಯ ಸಿಕ್ಸರ್‌, ಬೌಂಡರಿ ಸುರಿಮಳೆ ಸುರಿಸಿ, ಡೆಲ್ಲಿ ಬೌಲರ್‌ಗಳನ್ನು ಚೆಂಡಾಡಿದರು. ಪ್ರಭುಸಿಮ್ರಾನ್‌ 26 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸ್‌ ಬಾರಿಸಿ 76 ರನ್‌ ಬಾರಿಸಿದರು. ಪ್ರಿಯಾಂಶ್‌ ಆರ್ಯ 17 ಎಸೆತಗಳಲ್ಲಿ 43 ರನ್‌ ಗಳಿಸಿದರು. ಮೊದಲ 10 ಓವರ್‌ಗಳಲ್ಲಿ 150 ಗಡಿಯಲ್ಲಿದ್ದ ಪಂಜಾಬ್‌ 6,7,8ನೇ ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಕೊಂಚ ಸಂಕಷ್ಟ ಎದುರಿಸಿತು. ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ಜವಾಬ್ದಾರಿಯುತ ಆಟದಿಂದ ತಂಡ ಸುಲಭ ಗೆಲುವು ದಾಖಲಿಸಿತು. ಸ್ವಲ್ಪವೂ ಉತ್ಸಾಹ ಕಳೆದುಕೊಳ್ಳದ ತಂಡ 7 ಎಸೆತ ಇರುವಾಗಲೇ ಗುರಿ ತಲುಪಿ ಗೆದ್ದು ಬೀಗಿತು.

ಶ್ರೇಯಸ್‌ ಅಯ್ಯರ್‌ 36 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸ್‌ ಬಾರಿಸಿ 71 ರನ್‌, ಕೂಪರ್‌ ಕೊನೋಲಿ 10 ಎಸೆತಗಳಲ್ಲಿ 27 ರನ್‌, ನೆಹಲ್‌ ವಾದ್ರಾ 15 ಎಸೆತಕ್ಕೆ 25 ರನ್‌ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಡೆಲ್ಲಿ ಪರ ಬೌಲಿಂಗ್‌ ಮಾಡಿದ್ದ ಕುಲ್‌ದೀಪ್‌ ಯಾದವ್‌ 2, ಅಕ್ಷರ್‌ ಪಟೇಲ್‌ ಹಾಗೂ ವಿಪ್ರಜ್‌ ನಿಗಮ್‌ ತಲಾ ಒಂದು ವಿಕೆಟ್‌ ಕಿತ್ತರು.

ವಿಫಲವಾದ ಕೆಎಲ್‌ ರಾಹುಲ್‌ ರೆಕಾರ್ಡ್‌ ಆಟ:
ಭರ್ಜರಿ ಆರಂಭ ನೀಡಿದ್ದ ಕೆಎಲ್‌ ರಾಹುಲ್‌ (KL Rahul) 67 ಎಸೆತಕ್ಕೆ 16 ಬೌಂಡರಿ, 9 ಸಿಕ್ಸ್‌ ಬಾರಿಸಿ 152 ರನ್‌ಗಳಿಸಿದರು. 200 ರನ್‌ಗಳಿಗೂ ಹೆಚ್ಚು ರನ್‌ ಜೊತೆಯಾಟವಾಡಿ ಬೃಹತ್‌ ಗೆಲುವಿನ ಗುರಿ ನೀಡುವಲ್ಲಿ ಸಹಕಾರಿಯಾದರು.

ನಿತೀಶ್‌ ರಾಣಾ 44 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸ್‌ ಬಾರಿಸಿ 91 ರನ್‌, ನಿಸ್ಸಂಕಾ 7 ಎಸೆತಗಳಲ್ಲಿ 11 ರನ್‌ ಬಾರಿಸಿದರು. ಪಂಜಾಬ್‌ ಪರ ಬೌಲಿಂಗ್‌ ಮಾಡಿದ್ದ ಅರ್ಶದೀಪ್‌ ಸಿಂಗ್‌ ಹಾಗೂ ಕ್ಸೇವಿಯರ್‌ ಬಾರ್ಟ್ಲೆಟ್‌ ತಲಾ ಒಂದೊಂದು ವಿಕೆಟ್‌ ಪಡೆದರು.ಇದನ್ನೂ ಓದಿ:IPLನಲ್ಲಿ ಇತಿಹಾಸ ಬರೆದ ಕನ್ನಡಿಗ ಕೆ.ಎಲ್.ರಾಹುಲ್‌; 150 ರನ್‌ ಗಳಿಸಿದ ಮೊದಲ ಭಾರತೀಯ – ಅಭಿಷೇಕ್‌ ದಾಖಲೆ ಉಡೀಸ್‌

Share This Article