ಮದ್ವೆ ಆಗ್ಬೇಕಿದ್ದ ಯುವತಿಯನ್ನ ಫ್ಲ್ಯಾಟ್‌ಗೆ ಬರಲು ಹೇಳಿ ಸೆಕ್ಸ್ ಉತ್ತೇಜಕ ಮಾತ್ರೆ ಸೇವನೆ – ಹೃದಯಾಘಾತದಿಂದ ಸರ್ಕಾರಿ ಅಧಿಕಾರಿ ಸಾವು

1 Min Read

ಮಾತ್ರೆ ಓವರ್‌ಡೋಸ್‌ ಆಗಿದ್ದಕ್ಕೆ ಸಾವಿನ ಶಂಕೆ

ಚಂಡೀಗಢ: ಮದ್ವೆಯಾಗಬೇಕಿದ್ದ ಯುವತಿಯನ್ನ ಫ್ಲ್ಯಾಟ್‌ಗೆ ಬರಲು ಹೇಳಿ ಸೆಕ್ಸ್ ಉತ್ತೇಜಕ ಮಾತ್ರೆ ಸೇವಸಿ ಹೃದಯಾಘಾತದಿಂದ ಸರ್ಕಾರಿ ಅಧಿಕಾರಿ ಸಾವನಪ್ಪಿರುವ ಘಟನೆ ಹರಿಯಾಣ (Haryana) ಗುರುಗ್ರಾಮ್‌ನಲ್ಲಿ (Gurugram) ನಡೆದಿದೆ.

ಮೃತರನ್ನು ಮೂಲತಃ ನಾಗ್ಪುರದವರು ಎಂದು ಗುರುತಿಸಲಾಗಿದ್ದು, ಸರ್ಕಾರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ:ಕಾನ್‌ಸ್ಟೆಬಲ್‌ ಪ್ರೇಯಸಿಯಿಂದ ರಾದ್ಧಾಂತ; ಪೊಲೀಸ್‌ ಮನೆಗೆ ನುಗ್ಗಿ ಆತನ ಪತ್ನಿ, ಮಗನಿಗೆ ಚಾಕುವಿನಿಂದ ಇರಿದು ಹತ್ಯೆ

ಗುರುಗ್ರಾಮ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮೃತರಿಗೆ ಇತ್ತೀಚಿಗಷ್ಟೇ ನಿಶ್ಚಿತಾರ್ಥವಾಗಿತ್ತು. ಘಟನೆ ನಡೆದ ದಿನ ಮೃತ ವ್ಯಕ್ತಿ ತಾವು ಮದುವೆಯಾಗಬೇಕಿದ್ದ ಯುವತಿಯನ್ನ ಫ್ಲ್ಯಾಟ್‌ಗೆ ಬರಲು ಹೇಳಿದ್ದರು ಎನ್ನಲಾಗಿದೆ.

ಮೃತರ ಸಹೋದ್ಯೋಗಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕರೆ ಮಾಡಿದ್ದು, ರಿಸೀವ್ ಮಾಡಿರಲಿಲ್ಲ. ಪದೇ ಪದೇ ಕಾಲ್ ಮಾಡಿದರೂ ರಿಸೀವ್ ಮಾಡದ ಕಾರಣ ಕೊನೆಗೆ ಫ್ಲ್ಯಾಟ್‌ಗೆ ತೆರಳಿದರು. ಅಲ್ಲೂ ಕೂಡ ಬಾಗಿಲು ತೆರೆಯದೇ ಇದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಗಿಲು ಒಡೆದು ಒಳನುಗ್ಗಿದಾಗ ಬೆಡ್ ಮೇಲೆ ಶವ ಪತ್ತೆಯಾಗಿದೆ. ಬಾಗಿಲು ಒಳಗಿನಿಂದ ಲಾಕ್ ಮಾಡಿದ್ದು, ಕೊಲೆ ಮಾಡಿರುವ ಲಕ್ಷಣಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಪರಿಶೀಲನೆ ನಡೆಸಿದಾಗ ಸೆಕ್ಸ್ ಉತ್ತೇಜಕ ಮಾತ್ರೆ ಸೇವಿಸಿರುವುದು ಗೊತ್ತಾಗಿದೆ. ಓವರ್ ಡೋಸ್ ಮಾತ್ರೆ ಸೇವನೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಳಿಕ ಸಂಪೂರ್ಣ ಮಾಹಿತಿ ಹೊರಬರಲಿದೆ. ಬಿಎನ್‌ಎಸ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.ಇದನ್ನೂ ಓದಿ: ಕುಂದಾಪುರ ದೇವಸ್ಥಾನದಲ್ಲಿ ಕಳವು ಕೇಸ್‌ – ಇಬ್ಬರು ಆರೋಪಿಗಳ ಬಂಧನ

Share This Article