ತಿಲಕ್‌ ವರ್ಮಾ 101, ಗುಜರಾತ್‌ 100 – ಸತತ 4 ಸೋಲಿನ ಬಳಿಕ ಮುಂಬೈಗೆ ವಿಜಯದ ತಿಲಕ

2 Min Read

– 7ನೇ ಸ್ಥಾನಕ್ಕೆ ಮುಂಬೈ ಹೈಜಂಪ್‌

ಮುಂಬೈ: ಮೊದಲು ತಿಲಕ್‌ ವರ್ಮಾ (Tilak Varma) ಅವರ ಸ್ಫೋಟಕ ಶತಕ ನಂತರ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ತವರಿನಲ್ಲೇ ಗುಜರಾತ್‌ ಜೈಂಟ್ಸ್‌ (Gujarat Titans) ಅವರನ್ನು ಸೋಲಿಸಿ ಮುಂಬೈ ಇಂಡಿಯನ್ಸ್‌(Mumbai Indians) 99 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

- Advertisement -

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಮುಂಬೈ 5 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಗುಜರಾತ್‌ 15.5 ಓವರ್‌ಗಳಲ್ಲಿ 100 ರನ್‌ ಗಳಿಸಿ ಆಲೌಟ್‌ ಆಯ್ತು.

- Advertisement -

ಕೋಲ್ಕತ್ತಾ ವಿರುದ್ಧ ಗೆದ್ದ ಬಳಿಕ ಮುಂಬೈ ಸತತ ನಾಲ್ಕು ಸೋಲುಗಳನ್ನು ಕಂಡು ಅಂಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಾರಿತ್ತು. ಈಗ ಅತ್ಯುತ್ತಮ 0.067 ನೆಟ್‌ ರನ್‌ರೇಟ್‌ನೊಂದಿಗೆ ಜಯ ಸಾಧಿಸುವ ಮೂಲಕ 7ನೇ ಸ್ಥಾನಕ್ಕೆ ಜಿಗಿದಿದೆ. ಗುಜರಾತ್‌ 6ನೇ ಸ್ಥಾನದಲ್ಲೇ ಮುಂದುವರಿದಿದೆ.

- Advertisement -

ಗುಜರಾತ್‌ ಬುಮ್ರಾ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲೇ ವಿಕೆಟ್‌ ಕಳೆದುಕೊಂಡಿತು. ಸಾಯಿ ಸುದರ್ಶನ್‌ ಅವರು ಕ್ಯಾಚ್‌ ನೀಡಿ ಔಟಾದರು. ಈ ಮೂಲಕ ಈ ಐಪಿಎಲ್‌ನಲ್ಲಿ ಬುಮ್ರಾ ಮೊದಲ ವಿಕೆಟ್‌ ಪಡೆದರು.

- Advertisement -

ಬುಮ್ರಾ ಬೆನ್ನಲ್ಲೇ ಜೋಸ್‌ ಬಟ್ಲರ್‌ ಅವರನ್ನು ಪಾಂಡ್ಯ ಎಲ್‌ಬಿಗೆ ಕೆಡವಿದರು. ಇನ್ನಿಂಗ್ಸ್‌ ಕಟ್ಟಲು ಆರಂಭಿಸುತ್ತಿದ್ದಂತೆ ನಾಯಕ ಶುಭಮನ್‌ ಗಿಲ್‌ 14 ರನ್‌ ಗಳಿಸಿ ಅಶ್ವನಿ ಕುಮಾರ್‌ಗೆ ಔಟಾದರು.

ಗುಜರಾತ್‌ ಪರ ವಾಷಿಂಗ್ಟನ್‌ ಸುಂದರ್‌ 26 ರನ್‌(17 ಎಸೆತ, 5 ಬೌಂಡರಿ) ಮತ್ತು ಶಾರೂಖ್‌ ಖಾನ್‌ 17 ರನ್‌(13 ಎಸೆತ, 1 ಬೌಂಡರಿ, 1 ಸಿಕ್ಸ್‌) ಹೊಡೆದರು ಸ್ವಲ್ಪ ಪ್ರತಿರೋಧ ತೋರಿದರು.

ಮುಂಬೈ ಪರ ಅಶ್ವನಿ ಕುಮಾರ್‌ 4 ವಿಕೆಟ್‌ ಪಡೆದರೆ ಮಿಚೆಲ್‌ ಸ್ಯಾಂಟ್ನರ್‌, ಗಜನ್‌ಫರ್ ತಲಾ 2 ವಿಕೆಟ್‌ ಕಿತ್ತರು. ಬುಮ್ರಾ, ಪಾಂಡ್ಯ ತಲಾ ಒಂದೊಂದು ವಿಕೆಟ್‌ ಪಡೆದರು.

ತಿಲಕ್‌ ಸ್ಫೋಟಕ ಶತಕ
ಮೊದಲು ಬ್ಯಾಟ್‌ ಮಾಡಿದ ಮುಂಬೈ 5.5 ಓವರ್‌ಗಳಲ್ಲಿ44 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ತಿಲಕ್‌ ವರ್ಮಾ ಮತ್ತು ಹಾರ್ದಿಕ್‌ ಪಾಂಡ್ಯ 4ನೇ ವಿಕೆಟಿಗೆ 37 ಎಸೆತಗಳಲ್ಲಿ 81 ರನ್‌ ಜೊತೆಯಾಟವಾಡಿದರು. ಈ ಆಟದಲ್ಲಿ ತಿಲಕ್‌ ವರ್ಮಾ 22 ಎಸೆತಗಳಲ್ಲಿ 64 ರನ್‌ ಹೊಡೆದರೆ ಪಾಂಡ್ಯ 16 ಎಸೆತಗಳಲ್ಲಿ 15 ರನ್‌ ಹೊಡೆದು ಔಟಾದರು.

ಕೊನೆಯಲ್ಲಿ ತಿಲಕ್‌ ವರ್ಮಾ 5 ಎಸೆತಗಳಲ್ಲಿ 21 ರನ್‌ ಹೊಡೆದು ಐಪಿಎಲ್‌ನ ಚೊಚ್ಚಲ ಶತಕ ಹೊಡೆದರು. 33 ಎಸೆತಗಳಲ್ಲಿ ತಿಲಕ್‌ ಫಿಫ್ಟಿ ಹೊಡೆದರೆ ನಂತರದ 13 ಎಸೆತಗಳಲ್ಲಿ ಶತಕ ಹೊಡೆದಿದ್ದರು. ಅಂತಿಮವಾಗಿ ತಿಲಕ್‌ ವರ್ಮಾ ಔಟಾಗದೇ 101 ರನ್‌(45 ಎಸೆತ, 8 ಬೌಂಡರಿ, 7 ಸಿಕ್ಸ್‌) ಹೊಡೆದು ಮುಂಬೈ ಜಯದಲ್ಲಿ ಪ್ರಧಾನ ಪಾತ್ರವಹಿಸಿದರು.

Share This Article