ಮುಲ್ಲಾನ್‌ಪುರ: ಪಂಜಾಬ್ ಕಿಂಗ್ಸ್‌ನ (Punjab Kings) ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕೊನೊಲಿ ಲಕ್ನೋದ (Lucknow Super Giants) ಆಲ್‌ರೌಂಡರ್ ಮಾರ್ಕ್ರಾಮ್ ಅವರ ಒಂದೇ ಓವರ್‌ನಲ್ಲಿ 32 ರನ್ ಚಚ್ಚಿದ್ದಾರೆ.

ಪಂಜಾಬ್ ಕಿಂಗ್ಸ್ 12 ಓವರ್ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ರನ್ ಓಟಕ್ಕೆ ಕಡಿವಾಣ ಹಾಕಲು ರಿಷಭ್ ಪಂತ್ 13ನೇ ಓವರ್ ಎಸೆಯಲು ಮಾರ್ಕ್ರಾಮ್ ಕೈಗೆ ಬಾಲ್ ನೀಡಿದರು.

8ನೇ ಬೌಲರ್ ಆಗಿ ಮಾರ್ಕ್ರಾಮ್ (Aiden Markram) ಎಸೆದ ಮೊದಲ ಮೂರು ಎಸೆತವನ್ನು ಕೊನೊಲಿ(Cooper Connolly) ಸಿಕ್ಸ್‌ಗೆ ಅಟ್ಟಿದರು. ನಾಲ್ಕನೇಯ ಎಸೆತ ವೈಡ್ ಆಗಿತ್ತು. ಮರು ಎಸೆತದಲ್ಲಿ ಒಂಟಿ ರನ್ ಓಡಿದ್ದರಿಂದ ಸ್ಟ್ರೈಕ್‌ಗೆ ಪ್ರಿಯಾಂಶ್ ಆರ್ಯ(Priyansh Arya) ಬಂದರು. ಆರ್ಯ ಬಂದವರೇ ಕೊನೆಯ ಎರಡು ಎಸೆತದಲ್ಲಿ ಸಿಕ್ಸ್ ಸಿಡಿಸಿದರು. 5 ಸಿಕ್ಸ್, 1 ವೈಡ್, 1 ರನ್ ನಿಂದಾಗಿ ಈ ಓವರ್‌ನಲ್ಲಿ 32 ರನ್ ಬಂದಿತ್ತು. ದುಬಾರಿ ರನ್ ನೀಡಿದ ಬಳಿಕ ಮತ್ತೆ ಮಾರ್ಕ್ರಾಮ್ ಬೌಲಿಂಗ್ ಮಾಡಲಿಲ್ಲ.

𝐏𝐫𝐢𝐲𝐚𝐧𝐬𝐡 𝐀𝐈𝐑𝐖𝐀𝐘𝐒 🚀
Mohsin Khan goes short, & GEN-NEXT star #PriyanshArya answers with a cracking pull shot into the crowd. 🙌#TATAIPL 2026 | #PBKSvLSG | LIVE NOW 👉 https://t.co/UgZre9supv pic.twitter.com/m9XzzyICbW
— Star Sports (@StarSportsIndia) April 19, 2026
ಹಾಗೆ ನೋಡಿದರೆ ತಂಡದ ಮೊತ್ತ 3 ರನ್ ಆಗಿದ್ದಾಗ ಪ್ರಭುಸಿಮ್ರಾನ್ ಸಿಂಗ್ ಸೊನ್ನೆಗೆ ಔಟಾಗಿದ್ದರು. ಆದರೆ ಎರಡನೇ ವಿಕೆಟಿಗೆ ಪ್ರಿಯಾಂಶ್ ಆರ್ಯ ಮತ್ತು ಕೊನೊಲಿ ಕೇವಲ 80 ಎಸೆತಗಳಲ್ಲಿ 182 ರನ್ ಜೊತೆಯಾಟವಾಡಿದರು.

Nothing quite like that sweet left-handed power 🤌
🎥 Enjoy these beautiful maximums from Priyansh Arya and Cooper Connolly in their 1️⃣0️⃣0️⃣-run stand! 🚀
Updates ▶️ https://t.co/u5eUR1eqdA#TATAIPL | #KhelBindaas | #PBKSvLSG | @PunjabKingsIPL pic.twitter.com/YtiBpAGxMs
— IndianPremierLeague (@IPL) April 19, 2026
ಪ್ರಿಯಾಂಶ್ ಅರ್ಯಾ 93 ರನ್(37 ಎಸೆತ, 4 ಬೌಂಡರಿ, 9 ಸಿಕ್ಸ್), ಕೂಪರ್ ಕೊನೊಲಿ 87 ರನ್(46 ಎಸೆತ, 8 ಬೌಂಡರಿ, 7 ಸಿಕ್ಸ್) ಹೊಡೆದು ಔಟಾದರೆ ಕೊನೆಯಲ್ಲಿ ಸ್ಟೋಯಿನಿಸ್ 29 ರನ್(16 ಎಸೆತ, 2 ಬೌಂಡರಿ, 2 ಸಿಕ್ಸ್) ಶಶಾಂಕ್ ಸಿಂಗ್ 17 ರನ್(6 ಬೌಂಡರಿ, 1 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು. ಬ್ಯಾಟರ್‌ಗಳ ಸ್ಫೋಟಕ ಆಟದಿಂದ ಪಂಜಾಬ್ 7 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು.
ಪಂಜಾಬ್ ರನ್ ಏರಿದ್ದು ಹೇಗೆ?
50 ರನ್ – 34 ಎಸೆತ
100 ರನ್ – 53 ಎಸೆತ
150 ರನ್ – 73 ಎಸೆತ
200 ರನ್ – 99 ಎಸೆತ
250 ರನ್ – 115 ಎಸೆತ

