ನವದೆಹಲಿ: ಮುಸ್ಲಿಂ ನಾಯಕರಿಗೆ (Muslim leaders) ಕಾಂಗ್ರೆಸ್ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ (Zameer Ahmed Khan) ರಾಜೀನಾಮೆ ನೀಡುವ ವಿಚಾರ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಭಯ: ಸಾರಾ ಮಹೇಶ್
ನಾನು ಈ ವಿಚಾರವನ್ನ ಪತ್ರಿಕೆಯಲ್ಲಷ್ಟೇ ನೋಡಿದೆ. ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚೆಗೆ ಬಂದಿಲ್ಲ. ನಾನೂ ಚರ್ಚೆ ಮಾಡಿಲ್ಲ. ಕ್ಯಾಬಿನೆಟ್ ಬಳಿಕ ವೈಯಕ್ತಿಕ ಕೆಲಸ ಇತ್ತು ನಾನು ಹೋದೆ. ಆ ವಿಚಾರದಲ್ಲಿ ನನಗೆ ಏನು ಗೊತ್ತಿಲ್ಲ. ಹೈಕಮಾಂಡ್, ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್ – ವಿನಯ್ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಮುಸ್ಲಿಂ ನಾಯಕರು ಟಾರ್ಗೆಟ್ ಆಗಿಲ್ಲ. ಅವರಿಗೆ ಕಾಂಗ್ರೆಸ್ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ. ಪ್ರತಿ ಹಂತದಲ್ಲಿ ಬೆನ್ನೆಲುಬಾಗಿ ನಿಂತಿದ್ದೇವೆ. ಹಿಂದೆಯೂ ಮಾಡಿಲ್ಲ, ಮುಂದೆ ಮಾಡಲೂ ಸಾಧ್ಯವಿಲ್ಲ. ದಾವಣಗೆರೆ ದಕ್ಷಿಣ ಅದು ಅಲ್ಪಸಂಖ್ಯಾತರ ಸೀಟು ಅಲ್ಲ. ಅಲ್ಲಿ ಶಾಮನೂರು ಶಿವಶಂಕರಪ್ಪ ಕ್ಷೇತ್ರವನ್ನ ಕಾಪಾಡಿಕೊಂಡು ಬಂದಿದ್ದಾರೆ. ಜನಸಂಖ್ಯೆ ಇತ್ತು, ಅವರು ಕೇಳಿದ್ದು ತಪ್ಪಿಲ್ಲ. ಅಲ್ಪಸಂಖ್ಯಾತ ಕೆಲವು ನಾಯಕರು ಟಿಕೆಟ್ ಕೇಳಿದ್ದರು. ಅವರು ಒಪ್ಪಿದ ಮೇಲೆ ಸಮರ್ಥಗೆ ಟಿಕೆಟ್ ನೀಡಿದೆ. ಕೆಲವು ರಿಪೊರ್ಟ್ ಗಳ ಆಧಾರದ ಮೇಲೆ ಪಕ್ಷ ಕ್ರಮ ತೆಗೆದುಕೊಂಡಿದೆ ಅಷ್ಟೇ ಎಂದಿದ್ದಾರೆ.


