ಬೆಂಗಳೂರು: ಹಣದಾಸೆಗೆ (Money) ಬಿದ್ದು 15 ವರ್ಷದ ಮಗಳನ್ನು ತಾಯಿ ಹಾಗೂ ಮಲತಂದೆ ಸೇರಿ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣ ಚಂದ್ರಾ ಲೇಔಟ್ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಚಂದ್ರಾಲೇಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಈ ಕರಾಳ ಕೃತ್ಯ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ, ಆಕೆಯ ಮಲತಂದೆ ಹಾಗೂ ಮತ್ತೋರ್ವ ಮಹಿಳೆ ವಾಣಿ ಎಂಬಾಕೆಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಎನ್.ಆರ್ಪುರ | ಮಗನ ಎದುರೇ ತಂದೆ, ತಾಯಿಯನ್ನು ಕೊಚ್ಚಿ ಕೊಲೆಗೈದವನಿಗೆ ಗಲ್ಲು ಶಿಕ್ಷೆ
ಬಂಧಿತ ತಾಯಿ ಮತ್ತು ಮಲತಂದೆ ಪ್ರತಿದಿನ ಕಾರಿನಲ್ಲಿ ಬಾಲಕಿಯನ್ನು ಆರೋಪಿ ವಾಣಿ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು. ಅಲ್ಲಿ ಬಾಲಕಿ ಸಂಜೆವರೆಗೂ ಗ್ರಾಹಕರ ಕಿರುಕುಳಕ್ಕೆ ಬಲಿಯಾಗುತ್ತಿದ್ದಳು. ಗ್ರಾಹಕರಿಗೆ ವಾಣಿ 6 ರಿಂದ 10 ಸಾವಿರ ರೂಪಾಯಿ ಹಣ ನಿಗದಿಪಡಿಸುತ್ತಿದ್ದಳು. ಇದರಲ್ಲಿ ಅರ್ಧದಷ್ಟು ಹಣವನ್ನು ತಾಯಿಗೆ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ (POCSO Case) ದಾಖಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: 4 ವರ್ಷ ಲಿವ್-ಇನ್ನಲ್ಲಿದ್ದ.. ಈಗ ಬೇರೆಯವಳ ಜೊತೆ ಮದುವೆ – ಕಾನ್ಸ್ಟೆಬಲ್ ವಿರುದ್ಧ ವಿಡಿಯೋ ಮಾಡಿಟ್ಟು ಮಹಿಳೆ ಆತ್ಮಹತ್ಯೆ

