ಮತ್ತೆ ಬೆಂಗಳೂರು ಏರ್‌ಪೋರ್ಟ್‌ಗೆ ಜಾಗತಿಕ ಗೌರವ – ಸತತ 4ನೇ ಬಾರಿ ಪ್ರಶಸ್ತಿ

1 Min Read

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport) ಮತ್ತೆ ಜಾಗತಿಕ ಗೌರವಕ್ಕೆ ಪಾತ್ರವಾಗಿದೆ.

ಏರ್ ಪೋರ್ಟ್ಸ್ ಕೌನ್ಸಿಲ್ ಇಂಟರ್ ನ್ಯಾಷನಲ್ (ACI) ನೀಡುವ ಜಾಗತಿಕವಾಗಿ ಆಗಮನದ ಅತ್ಯುತ್ತಮ ವಿಮಾನ ನಿಲ್ದಾಣ(Best Airport on Arrivals) ಪ್ರಶಸ್ತಿಗೆ ಸತತ ನಾಲ್ಕನೇ ವರ್ಷವೂ ಪಾತ್ರವಾಗಿದೆ.

ಸೇವೆ, ಸೌಕರ್ಯ, ಅನುಕೂಲತೆ ಮತ್ತು ಶುಚಿತ್ವದಲ್ಲಿ ಸ್ಥಿರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ಪ್ರಶಸ್ತಿಗೆ ಭಾಜನಾಗಿದೆ.  ಇದನ್ನೂ ಓದಿ: Iran Israel War | ದುಬೈಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ವಾಪಸ್‌

ಡಿಬೋರ್ಡಿಂಗ್ ಕಾರ್ಯವಿಧಾನಗಳು, ಸುವ್ಯವಸ್ಥಿತ ವಲಸೆ ಮತ್ತು ಕಸ್ಟಮ್ಸ್ ಪ್ರಕ್ರಿಯೆಗಳು, ಸಂಘಟಿತ ಬ್ಯಾಗೇಜ್ ಕ್ಲೈಮ್ ಸೇವೆಗಳು ಮತ್ತು ಸಾರಿಗೆ, ಹೋಟೆಲ್‌ಗಳು ಮತ್ತು AI- ಚಾಲಿತ ಸಹಾಯ ರೋಬೋಟ್‌ಗಳಂತಹ ಮೂಲಸೌಕರ್ಯಗಳ ಲಭ್ಯತೆ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ವಿಮಾನ ನಿಲ್ದಾಣದಲ್ಲಿ ಒದಗಿಸಲಾಗಿದ್ದು, ಪ್ರಯಾಣಿಕರಿಗೆ ಹೆಚ್ಚು ಹತ್ತಿರವಾಗಿದೆ.

ಈ ನಿರಂತರ ಸಾಧನೆ ಬೆಂಗಳೂರಿನ ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಉನ್ನತ ಸೇವಾ ಮಾನದಂಡಗಳ ಪ್ರತಿಬಿಂಬವಾಗಿದೆ. ಈಗಾಗಲೇ ಭಾರತದಲ್ಲಿ ‘ಏರೋಸ್ಪೇಸ್ ಮತ್ತು ಡಿಫೆನ್ಸ್ ರಾಜಧಾನಿ’ ಎಂದು ಗುರುತಿಸಿಕೊಂಡಿರುವ ಕರ್ನಾಟಕ ವಿಮಾನಯಾನ ಕ್ಷೇತ್ರದಲ್ಲಿಯೂ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುತ್ತಿದೆ.

Share This Article