ಇರಾನ್‌ ಮೇಲೆ ದಾಳಿ ನಡೆಸಿ – ಟ್ರಂಪ್‌ಗೆ ಹಲವು ಬಾರಿ ಫೋನ್‌ ಮಾಡಿ ಒತ್ತಡ ಹೇರಿದ್ದ ಸೌದಿ

1 Min Read

ವಾಷಿಂಗ್ಟನ್‌: ಇರಾನ್‌ (Iran) ಮೇಲೆ ದಾಳಿ ನಡೆಸುವಂತೆ ಸೌದಿ ಅರೇಬಿಯಾ(Saudi Arabia) ಅಮೆರಿಕಗೆ ಒತ್ತಡ ಹೇರಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (Mohammed bin Salman) ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಹಲವು ಬಾರಿ ಖಾಸಗಿಯಾಗಿ ಫೋನ್ ಕರೆಗಳನ್ನು ಮಾಡಿ ಇರಾನ್‌ ಮೇಲೆ ದಾಳಿ ನಡೆಸುವಂತೆ ಒತ್ತಡ ಹೇರಿದ್ದರು ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ಇದನ್ನೂ ಓದಿ: ಇರಾನ್‌ ವಿರುದ್ಧ ಹೋರಾಟದಲ್ಲಿ ಮುಸ್ಲಿಮ್‌ ದೇಶಗಳು ಅಮೆರಿಕದೊಂದಿಗೆ ಕೈ ಜೋಡಿಸಿದ್ದು ಯಾಕೆ?

 

ಮೊಹಮ್ಮದ್‌ ಬಿನ್‌ ಸಲ್ಮಾನ್‌ ಸಾರ್ವಜನಿಕವಾಗಿ ಇರಾನ್‌ ಮೇಲಿನ ದಾಳಿಗೆ ಸೌದಿ ವಾಯುಸೀಮೆಯನ್ನು ಬಳಸಲು ಬಿಡುವುದಿಲ್ಲ. ರಾಜತಾಂತ್ರಿಕವಾಗಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆ ಹೇಳಿದ್ದರೂ ದಾಳಿ ನಡೆಸುವಂತೆ ಅಮೆರಿಕಕ್ಕೆ ಒತ್ತಡ ಹೇರಿದ್ದರು. ಇದನ್ನೂ ಓದಿ: ವಿಶ್ವದ ಪ್ರಮುಖ ತೈಲಮಾರ್ಗ ಹಾರ್ಮೂಜ್‌ ಜಲಸಂಧಿ ಬಂದ್‌ – ಭಾರತದ ಮೇಲೆ ಪರಿಣಾಮ ಏನು?

ಅಮೆರಿಕ, ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಇರಾನ್‌ ಯುಎಇಯ ಅಬುಧಾಬಿ ಮತ್ತು ದುಬೈ, ಕತಾರ್‌ನ ದೋಹಾ ಮತ್ತು ಸೌದಿ ಅರೇಬಿಯಾದ ರಿಯಾದ್ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದೆ.
Share This Article