ಮುಂಬೈ: ತನ್ನ ಬ್ಲಂಡರ್‌ನಿಂದಲೇ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಮುಂಬೈ ಇಂಡಿಯನ್ಸ್‌ಗೆ (MI) ಸೋಲಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ನಿನ್ನೆಯ ಪಂದ್ಯದಲ್ಲಿ ಆರಂಭಿಕ ಆಟಗಾರ ಟ್ರಾವಿಸ್ ಹೆಡ್(Travis Head) 76 ರನ್(30 ಎಸೆತ, 4 ಬೌಂಡರಿ, 8 ಸಿಕ್ಸ್) ಹೊಡೆದು ಔಟಾಗಿದ್ದರು. ಒಂದು ವೇಳೆ ಮುಂಬೈ ಇಂಡಿಯನ್ಸ್ ಹೆಡ್ 8 ರನ್‌ಗಳಿಸಿದ್ದಾಗ ರಿವ್ಯೂ ಪಡೆಯುತ್ತಿದ್ದರೆ ಔಟಾಗುತ್ತಿದ್ದರು ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
MI fans, look away. 🙈
One missed DRS for Travis Head’s edge, and he turns a “should’ve been out” into a 30-ball 76. Talk about a billionaire mistake on a cricket pitch. This non-review might just be the most expensive thing MI has ever bought. 💀#MIvSRH pic.twitter.com/xoVkuvqhxh— Arfat N. (@arfat_niyazi) April 29, 2026
ಹೈದರಾಬಾಬ್ ಇನ್ನಿಂಗ್ಸ್‌ನ ಮೂರನೇ ಓವರ್‌ನ ಟ್ರೆಂಟ್ ಬೌಲ್ಟ್(Trent Boult) ಅವರ ಎರಡನೇ ಎಸೆತದಲ್ಲಿ ಚೆಂಡು ಹೆಡ್ ಬ್ಯಾಟ್ ಬಳಿ ಸಾಗಿ ಕೀಪರ್ ರಿಯಾನ್ ರಿಕೆಲ್ಟನ್ ಕೈ ಸೇರಿತ್ತು. ಬಾಲ್ ಕೀಪರ್ ಕೈ ಸೇರಿದರೂ ಮುಂಬೈ ತಂಡದ ಔಟ್‌ಗೆ ಮನವಿಯಾಗಲಿ ರಿವ್ಯೂ ಪಡೆದಿರಲಿಲ್ಲ. ಆದರೆ ಆಲ್ಟ್ರಾ ಎಡ್ಜ್‌ನಲ್ಲಿ ಚೆಂಡು ಬ್ಯಾಟ್ ಸವರಿದ್ದು ಕಾಣಿಸಿತ್ತು. ಇದನ್ನೂ ಓದಿ: ನನ್ನ ಬ್ಯಾಟ್‌ಗೆ ದೇವರೇ AI ಚಿಪ್ ಅಂಟಿಸಿದ್ದಾನೆ, ಈಗ ಅದನ್ನೇ ಬಳಸ್ತಿದ್ದೀನಿ – ಪಾಕ್ ಕ್ರಿಕೆಟ್ ತಜ್ಞನ ಮಾತಿಗೆ ವೈಭವ್ ಕೌಂಟರ್
ಆರಂಭದಲ್ಲೇ 2 ಜೀವದಾನ ಪಡೆದ ಹೆಡ್ ನಂತರ ಮುಂಬೈ ಬೌಲರ್‌ಗಳನ್ನು ಚೆಂಡಾಡಿದರು. 20 ಎಸೆತಗಳಲ್ಲಿ ಅರ್ಧಶತಕ ಹೊಡೆದ ಹೆಡ್ ಕೊನೆಗೆ 76 ರನ್ ಗಳಿಸಿದ್ದಾಗ ಪಾಂಡ್ಯ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ಇದನ್ನೂ ಓದಿ: ನನ್ನ ಜೊತೆ ಸೆಲ್ಫಿ ಬೇಕಾ? ಹಾಗಾದ್ರೆ 100 ರೂಪಾಯಿ ಕೊಡಿ – ಪುಟಾಣಿಗಳ ಜೊತೆ ವೈಭವ್ ಸೂರ್ಯವಂಶಿ ತುಂಟಾಟ!
SHOULD HAVE BEEN TAKEN TO THIS CATCH AT THIS LEVEL.
Travis Head dropped by Naman Dhir..!!!👀 pic.twitter.com/MBXQ3zu14d
— Mohd Faizy (@ansarifaizy08) April 29, 2026
ಮುಂಬೈ ರಿಯಾನ್ ರಿಕೆಲ್ಟನ್ 123 ರನ್(55 ಎಸೆತ, 10 ಬೌಂಡರಿ, 8 ಸಿಕ್ಸ್) ಅವರ ಶತಕದ ಸಹಾಯದಿದ 5 ವಿಕೆಟ್ ನಷ್ಟಕ್ಕೆ 243 ರನ್ ಹೊಡೆದಿತ್ತು. ಕಠಿಣ ಮೊತ್ತವಾಗಿದ್ದರೂ ಹೈದರಾಬಾದ್ ಹೆಡ್ 76 ರನ್, ಅಭಿಷೇಕ್ ಶರ್ಮಾ 45 ರನ್(24 ಎಸೆತ, 4 ಬೌಂಡರಿ, 3 ಸಿಕ್ಸ್), ಕ್ಲಾಸೆನ್ 65 ರನ್(30 ಎಸೆತ, 7 ಬೌಂಡರಿ, 4 ಸಿಕ್ಸ್) ಸಲಿಲ್ ಅರೋರಾ 30 ರನ್(10 ಎಸೆತ, 2 ಬೌಂಡರಿ, 3 ಸಿಕ್ಸ್) ನೆರವಿನಿಂದ ಇನ್ನೂ 8 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 249 ರನ್ ಹೊಡೆದು 6 ವಿಕೆಟ್‌ಗಳ ಜಯ ಸಾಧಿಸಿತು.

