ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ (Ladakh) 4.1 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಮುಂಜಾನೆ 3:54ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಲೇಹ್‌ನಲ್ಲಿ 150 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಮಧ್ಯಮ ತೀವ್ರತೆಯ ಭೂಕಂಪ ಇದಾಗಿದೆ ಎಂದು ವರದಿಯಾಗಿದೆ.
EQ of M: 4.1, On: 30/04/2026 03:54:49 IST, Lat: 36.722 N, Long: 74.456 E, Depth: 150 Km, Location: Leh, Ladakh.
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @Ravi_MoES @GSuresh_NCS @ndmaindia pic.twitter.com/gGVTMCqgLQ— National Center for Seismology (@NCS_Earthquake) April 29, 2026
ಭೂಕಂಪ ಹಿನ್ನೆಲೆ ಮನೆಯೊಳಗಿದ್ದ ನಿವಾಸಿಗಳು ತಕ್ಷಣವೇ ಹೊರಗೆ ಓಡಿ ಬಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಇನ್ನು ಅಫ್ಘಾನಿಸ್ಥಾನದಲ್ಲೂ 4.3 ತೀವ್ರತೆಯ ಭೂಕಂಪವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

