ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್

1 Min Read

ತಾರೆಗಳಾದ ರಶ್ಮಿಕಾ ಮಂದಣ್ಣ (Rashmika Mandanna), ವಿಜಯ್ ದೇವರಕೊಂಡ (Vijay Deverakonda) ಫೆ.26 ರಂದು ಉದಯಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮದುವೆಯಾದ್ರು. ಆಪ್ತರಿಗಷ್ಟೇ ಆಹ್ವಾನಿಸಲಾಗಿತ್ತು. ಈ ಮದುವೆ ಸಂಪೂರ್ಣ ಖಾಸಗಿಯಾಗಿದ್ದು, ಬರ‍್ಯಾರೂ ಪಾಲ್ಗೊಳ್ಳಲು ಆಸ್ಪದ ಇರಲಿಲ್ಲ. ಆದರೀಗ ಮದುವೆಯ ಖುಷಿಯಲ್ಲಿ ಇಡೀ ದೇಶಾದ್ಯಂತ ಆಯ್ದ ಕೆಲವು ನಗರಗಳಲ್ಲಿ ಸಿಹಿ ಹಂಚಲು ಮುಂದಾಗಿದ್ದಾರೆ. ಸಿಹಿ ಜೊತೆ ವಿವಿಧ ರಾಜ್ಯಗಳ ವಿವಿಧ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಮಾಡಲು ಮುಂದಾಗಿದ್ದಾರೆ. ಈ ವಿಚಾರವನ್ನು ರಶ್ಮಿಕಾ ಹಾಗೂ ವಿಜಯ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪತ್ರದ ಮೂಲಕ ಮಾಹಿತಿ ಹಂಚಿಕೊಂಡಿರುವ ರಶ್ಮಿಕಾ-ವಿಜಯ್ ಜೋಡಿ…’ನಮ್ಮ ಪ್ರತಿ ಹೆಜ್ಜೆಯಲ್ಲೂ ನೀವಿದ್ದೀರಿ, ನಮ್ಮ ಪ್ರೀತಿಯಲ್ಲೂ ನೀವಿದ್ದೀರಿ.. ಹೀಗಾಗಿ ನಿಮ್ಮೊಂದಿಗೆ ನಮ್ಮ ಮದುವೆಯ ಖುಷಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇವೆ. ಭಾರತ ಸಿಹಿ ಮತ್ತು ಅನ್ನವನ್ನ ಹಂಚಿಕೊಳ್ಳುವ ಮೂಲಕ ಖುಷಿಯನ್ನು ಸಂಭ್ರಮಿಸುತ್ತದೆ. ಅದರಂತೆ ನಾವು ಪ್ರತಿ ಜಿಲ್ಲೆಯ ಕೆಲವು ನಗರಗಳಲ್ಲಿ ಸಿಹಿ ತುಂಬಿದ ಟ್ರಕ್‌ಗಳನ್ನು ಕಳಿಸುತ್ತಿದ್ದೇವೆ. ಬೇರೆ ಬೇರೆ ನಗರದ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಇರುತ್ತದೆ’ ಎಂದಿದ್ದಾರೆ ರಶ್ಮಿಕಾ. ಇದನ್ನೂ ಓದಿ: Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಮಾಹಿತಿ ಜೊತೆ ಯಾವಾಗ ರಾಜ್ಯದ ಯಾವೆಲ್ಲ ಜಾಗದಲ್ಲಿ ಸಿಹಿ ಹಂಚಲಾಗುತ್ತೆ, ಯಾವ ದೇವಸ್ಥಾನದಲ್ಲಿ ಅನ್ನದಾನ ಇರುತ್ತೆ ಅನ್ನೋದನ್ನ ಹೇಳಿದ್ದಾರೆ. ಅಂದಹಾಗೆ ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಹಾಗೂ ಕೊಡಗಿನಲ್ಲಿ ಸಿಹಿ ಹಂಚೋದಾಗಿ ತಿಳಿಸಿದ್ದಾರೆ. ಮೈಸೂರಿನ ಚಾಮುಂಡಿ ದೇವಸ್ಥಾನ, ಬೆಂಗಳೂರಿನ ರಾಧಾಕೃಷ್ಣ ದೇವಸ್ಥಾನ, ಕೊಡಗಿನ ಪಾಡಿ ಇಗ್ಗುತಪ್ಪ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಇರೋದಾಗಿ ಹೇಳಿದ್ದಾರೆ. ಹೀಗೆ ಬೇರೆ ಬೇರೆ ನಗರದಲ್ಲಿ ಅನ್ನಸಂತರ್ಪಣೆ ಮಾಡುವ ದೇವಸ್ಥಾನವನ್ನೂ ರಶ್ಮಿಕಾ ವಿಜಯ್ ಹೆಸರಿಸಿದ್ದಾರೆ. ರಶ್ಮಿಕಾ ವಿಜಯ್ ಆರತಕ್ಷತೆ ಸಮಾರಂಭ ಹೈದ್ರಾಬಾದ್‌ನಲ್ಲಿ ಮಾ.4 ರಂದು ನಡೆಯಲಿದೆ. ಮಾರ್ಚ್ 1 ರಿಂದ ಸಿಹಿ ವಿತರಣೆ ಹಾಗೂ ಅನ್ನದಾನಕ್ಕೆ ಚಾಲನೆ ಕೊಡ್ತಿರೋದಾಗಿ ತಿಳಿಸಿದ್ದಾರೆ.

Share This Article