ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ

1 Min Read

ಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ (Vijay) ಪತ್ನಿ ಸಂಗೀತಾ ಸೊರ್ನಲಿಂಗಂ (Sangeetha Sornalingam) ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ನಟನ ಜೊತೆಗಿನ 27 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ.

1999 ರ ಆಗಸ್ಟ್‌ನಲ್ಲಿ ವಿವಾಹವಾದ ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

ವಿಜಯ್‌ ಅವರು ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಪತ್ನಿ ಆರೋಪಿಸಿದ್ದಾರೆ. ಈ ಸಂಬಂಧ ನಿಲ್ಲಿಸುತ್ತೇನೆ ಅಂತ ವಿಜಯ್‌ ಭರವಸೆ ಕೊಟ್ಟಿದ್ದರು. ಆದರೆ, ಅದು ಹಾಗೆಯೇ ಮುಂದುವರಿದಿದೆ ಎಂದು ಅರ್ಜಿಯಲ್ಲಿ ಸಂಗೀತಾ ಉಲ್ಲೇಖಿಸಿದ್ದಾರೆ.

ಪತಿ ನನ್ನನ್ನು ಸಾಮಾಜಿಕ ಮತ್ತು ವೃತ್ತಿಪರ ಜೀವನದಿಂದ ದೂರ ಇಟ್ಟಿದ್ದಾರೆ. ವಿದೇಶ ಪ್ರವಾಸ ಮಾಡುವುದು ಮತ್ತು ಆ ನಟಿಯೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದಾರೆ. ಈ ಪ್ರವಾಸದ ಫೋಟೊಗಳನ್ನು ನಟಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಇದರಿಂದ ನನಗೆ ಮತ್ತು ಮಕ್ಕಳಿಗೆ ಅವಮಾನವಾಗಿದೆ ಎಂದು ವಿಜಯ್‌ ಪತ್ನಿ ಆರೋಪಿಸಿದ್ದಾರೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌

ತಮಿಳು ಕೈಗಾರಿಕೋದ್ಯಮಿಯೊಬ್ಬರ ಪುತ್ರಿ ಸಂಗೀತಾ ಅವರು 1999ರ ಆಗಸ್ಟ್ 25 ರಂದು ವಿಜಯ್‌ ಅವರೊಂದಿಗೆ ವಿವಾಹವಾದರು. ಇದಕ್ಕೂ ಮೊದಲು ವಿಜಯ್‌ ಕಟ್ಟಾ ಅಭಿಯಾನಿಯಾಗಿದ್ದರು. ಇಬ್ಬರ ವಿವಾಹವು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿತ್ತು.

Share This Article