ಅಫ್ಘಾನ್ ಮಿಲಿಟರಿ ದಾಳಿಗೆ 55 ಸೈನಿಕರು ಬಲಿ – ಪಾಕ್‌ನಿಂದ ಪ್ರತೀಕಾರದ ದಾಳಿ; 3 ಕಡೆ ಬಾಂಬ್‌ ಸ್ಫೋಟ

2 Min Read

ಇಸ್ಲಾಮಾಬಾದ್‌/ಕಾಬೂಲ್‌: ಪಾಕಿಸ್ತಾನದ ವಾಯುದಾಳಿಗೆ (Pakistan AirStrikes) ಪ್ರತೀಕಾರವಾಗಿ ಅಫ್ಘಾನಿಸ್ತಾನ ನಡೆಸಿದ ಮಿಲಿಟರಿ ದಾಳಿಯಲ್ಲಿ ಪಾಕಿಸ್ತಾನದ 55 ಸೈನಿಕರು (Soldiers) ಹತ್ಯೆಗೀಡಾಗಿದ್ದರು, ಅಲ್ಲದೇ 23 ಮಂದಿಯನ್ನ ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಇದಕ್ಕೆ ಪಾಕಿಸ್ತಾನ ಕೂಡ ಪ್ರತೀಕಾರ ತೀರಿಸಿಕೊಂಡಿದೆ.

ಶುಕ್ರವಾರ (ಇಂದು) ಬೆಳ್ಳಂಬೆಳಗ್ಗೆ ಕಾನೂಲ್‌ ಮತ್ತು ಇತರ 2 ಅಫ್ಘಾನ್‌ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ಪಾಕ್‌ ಸೈನಿಕರನ್ನು ಹತ್ಯೆಗೈದ ಬಳಿಕ ಈ ದಾಳಿ ಸಂಭವಿಸಿರುವುದಾಗಿ ಅಫ್ಘಾನಿಸ್ತಾನದ (Afghanistan) ಸರ್ಕಾರಿ ವಕ್ತಾರರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಬಜೆಟ್‌ ನಿಮ್ಮ ಐಎಂಎಫ್‌ ಸಾಲಕ್ಕಿಂತಲೂ 2 ಪಟ್ಟು ಹೆಚ್ಚಿದೆ: ಪಾಕ್‌ಗೆ ಭಾರತ ಗುದ್ದು

ಕಾಬೂಲ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿದೆ. ಕಾಬೂಲ್ (Kabul), ಕಂದಹಾರ್ ಮತ್ತು ಪಕ್ತಿಯಾ ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಆದ್ರೆ ದಾಳಿಯಲ್ಲಿ ಸಂಭಾವ್ಯ ಸಾವು ನೋವುಗಳ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಇಸ್ರೇಲ್ ಜೊತೆ ಸದಾ ನಿಲ್ಲುತ್ತದೆ: ಮೋದಿ

ವಿವಾದಿತ ಡುರಾಂಡ್ ರೇಖೆಯ ಉದ್ದಕ್ಕೂ ಮಿಲಿಟರಿ ನೆಲೆಗಳು ಮತ್ತು ಔಟ್‌ಪೋಸ್ಟ್‌ಗಳನ್ನ ತನ್ನ ಪಡೆಗಳು ವಶಪಡಿಸಿಕೊಂಡಿವೆ ಎಂದು ತಾಲಿಬಾನ್ ಹೇಳಿಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ವಾಯುದಾಳಿ ನಡೆಸಿದೆ. ಈ ಬೆನ್ನಲ್ಲೇ ಡುರಾಂಡ್ ರೇಖೆ ಎಂದು ಕರೆಯಲ್ಪಡುವ 2,611 ಕೀಮೀ ಉದ್ದದ ಗಡಿ ಹಾಗೂ ಗಡಿಯ ಇನ್ನೊಂದು ಭಾಗವಾದ ಟೋರ್ಖಾಮ್‌ನಲ್ಲಿಯೂ ಉಭಯ ದೇಶಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಜೊತೆಗೆ ಪಾಕಿಸ್ತಾನ ಸೇನೆ ಗಡಿ ಗ್ರಾಮಗಳನ್ನ ಖಾಲಿ ಮಾಡಿಸಿದೆ.

ಇದಕ್ಕೂ ಮುನ್ನ ಏನಾಗಿತ್ತು?
ನಂಗರ್‌ಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳಲ್ಲಿ ಪಾಕಿಸ್ತಾನ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಅಫ್ಘಾನ್‌ ಪಡೆ ಮಿಲಿಟರಿ ದಾಳಿ ನಡೆಸಿ, 55 ಪಾಕ್‌ ಸೈನಿಕರನ್ನ ಕೊಂದಿತ್ತು. 23 ಮಂದಿಯನ್ನ ಜೀವಂತ ಸೆರೆ ಹಿಡಿದೆ. ಡುರಾಂಡ್‌ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಸೇನಾ ಕೇಂದ್ರಗಳು ಮತ್ತು ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ಮಾಡಿದ್ದ ಅಫ್ಘಾನ್‌ ಒಂದು ಪ್ರಧಾನ ಕಚೇರಿ ಮತ್ತು 19 ಔಟ್‌ಪೋಸ್ಟ್‌ ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಸೇನೆ ವಾಯುದಾಳಿ ನಡೆಸಿದೆ.

ಕಳೆದ ಅಕ್ಟೋಬರ್ 19 ರಂದು ಟರ್ಕಿ ಮಧ್ಯಪ್ರವೇಶದ ಬಳಿಕ ಕದನ ವಿರಾಮ ಘೋಷಿಸಿದ್ದ ಎರಡು ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ಏರ್ಪಟ್ಟಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಮಹಿಳೆಯರ ಜೊತೆ ಸಂಬಂಧವಿದೆ: ಎಪಿಸ್ಟೀನ್‌ ಜೊತೆಗಿನ ಸ್ನೇಹಕ್ಕೆ ಕ್ಷಮೆಯಾಚಿದ ಬಿಲ್‌ ಗೇಟ್ಸ್‌

Share This Article