ಪಾಕ್‌ ವಿರುದ್ಧ ವಿಶಿಷ್ಟ ಸಾಧನೆ ಬರೆದ ಭಾರತ

1 Min Read

ಕೊಲಂಬೋ: ಪಾಕಿಸ್ತಾನದ (Pakistan) ವಿರುದ್ಧ ಭಾರತ (Team India) 175 ರನ್‌ ಹೊಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.

ಇಲ್ಲಿಯವರೆಗೆ ಇತ್ತಂಡಗಳ ಟಿ20 ವಿಶ್ವಕಪ್‌ ಪಂದ್ಯದಲ್ಲಿ 160 ರನ್‌ ಗರಿಷ್ಟ ರನ್‌ ಆಗಿತ್ತು. ಮೆಲ್ಬರ್ನ್‌ನಲ್ಲಿ ನಡೆದ 2022ರ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್‌ ನಷ್ಟಕ್ಕೆ 159 ರನ್‌ ಹೊಡೆದಿತ್ತು. ಚೇಸ್‌ ಮಾಡಿ ಭಾರತ ಕೊಹ್ಲಿ ಅವರ ಅಜೇಯ 82 ರನ್‌(53 ಎಸೆತ,6 ಬೌಂಡರಿ, 4 ಸಿಕ್ಸ್‌ ) ಸಹಾಯದಿಂದ 20 ಓವರ್‌ನಲ್ಲಿ6 ವಿಕೆಟಿಗೆ 160 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತ್ತು. ಇದನ್ನೂ ಓದಿ: ಅಂದು ಅಭಿಷೇಕ್‌ ಇಂದು ಇಶಾನ್‌ ಕಿಶನ್‌ – ಅಫ್ರಿದಿಗೆ ಬಿಸಿ ಮುಟ್ಟಿಸಿದ ಓಪನರ್ಸ್‌

 

ಇಂಡೋ ಪಾಕ್‌ ಗರಿಷ್ಟ ಮೊತ್ತ
1.175/7 – ಕೊಲಂಬೋ, ಭಾರತ – 2026
2.160/6 – ಮೆಲ್ಬರ್ನ್‌, ಭಾರತ – 2022
3. 159/8 – ಮೆಲ್ಬರ್ನ್‌, ಪಾಕಿಸ್ತಾನ- 2022
4. 157/5 – ಜೋಹಾನ್ಸ್‌ಬರ್ಗ್‌, ಭಾರತ -2007
5.152/0 – ದುಬೈ, ಪಾಕಿಸ್ತಾನ, 2021

ಸ್ಪಿನ್‌ಗೆ ನೆರವಾಗುವ ಪಿಚ್‌ನಲ್ಲಿ ಭಾರತ 7 ವಿಕೆಟ್‌ ನಷ್ಟಕ್ಕೆ 175 ರನ್‌ ಹೊಡೆದಿದೆ. ಆರಂಭದಲ್ಲಿ ಅಭಿಷೇಕ್‌ ಶರ್ಮಾ ಶೂನ್ಯಕ್ಕೆ ಔಟಾದರೂ ನಂತರ ಇಶಾನ್‌ ಕಿಶಾನ್‌ 77 ರನ್‌(40 ಎಸೆತ,10 ಬೌಂಡರಿ, 3 ಸಿಕ್ಸ್‌), ತಿಲಕ್‌ ವರ್ಮಾ 25 ರನ್‌(24 ಎಸೆತ, 2 ಬೌಂಡರಿ, 1 ಸಿಕ್ಸ್‌) ಸೂರ್ಯಕುಮಾರ್‌ ಯಾದವ್‌32 ರನ್‌(29 ಎಸೆತ,3 ಬೌಂಡರಿ) ಹೊಡೆದು ಔಟಾದರು.

ಕೊನೆಯಲ್ಲಿ ಶಿವಂ ದುಬೆ 27 ರನ್‌(17 ಎಸೆತ, 3 ಬೌಂಡರಿ, 1 ಸಿಕ್ಸ್‌) ರಿಂಕು ಸಿಂಗ್‌ ಔಟಾಗದೇ 11 ರನ್‌(4 ಎಸೆತ, 1 ಬೌಂಡರಿ, 1ಸಿಕ್ಸ್‌) ಹೊಡೆದು ತಂಡದ ಮೊತ್ತವನ್ನು 170ರ ಗಡಿಯನ್ನು ದಾಟಿಸಿದರು.

Share This Article