ಐಡಿ ಕಾರ್ಡ್‌ ತೋರಿಸಿ – ಜರ್ಮನಿಯಲ್ಲಿ ಅಸಿಮ್‌ ಮುನೀರ್‌ಗೆ ಮುಜುಗರ

1 Min Read

ಮ್ಯೂನಿಕ್‌: ಪಾಕಿಸ್ತಾನದ (Pakistan) ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಅವರು ಜರ್ಮನಿಯಲ್ಲಿ (Germany) ಭಾರೀ ಮುಜುಗರ ಅನುಭವಿಸಿದ್ದಾರೆ.

ಮ್ಯೂನಿಕ್‌ ಭದ್ರತಾ ಸಮ್ಮೇಳನದಲ್ಲಿ (MSC) ಭಾಗಿಯಾಗಲು ಮುನೀರ್‌ ಸಭಾಂಗಣಕ್ಕೆ ಬಂದಿದ್ದಾರೆ. ಇಬ್ಬರು ಸಿಬ್ಬಂದಿ ಜೊತೆ ಸಮವಸ್ತ್ರದಲ್ಲಿ ಮುನೀರ್‌ ಬಂದಾಗ ಅಲ್ಲಿದ್ದ ಸಿಬ್ಬಂದಿ ತಡೆದು ನಿಮ್ಮ ಐಡಿ ಕಾರ್ಡ್‌ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಭದ್ರತಾ ಸಿಬ್ಬಂದಿ ಇಂದು ಕ್ಷಣ ತಡೆದಿದ್ದನ್ನು ನೋಡಿ ಮುಜುಗರಕ್ಕೀಡಾಗಿದ್ದಾರೆ. ನಂತರ ಮುನೀರ್‌ ಜೊತೆಗೆ ಬಂದಿದ್ದ ಮತ್ತೊಬ್ಬ ಸಿಬ್ಬಂದಿ ಐಡಿ ಕಾರ್ಡ್‌ತೋರಿಸಿದ ಬಳಿಕ ಒಳಗಡೆ ಪ್ರವೇಶಿಸಿದ್ದಾರೆ.

ಅಂತಾರಾಷ್ಟ್ರೀಯ ಗಣ್ಯರು ಭಾಗಿಯಾಗುತ್ತಿರುವ ಕಾರಣ ಸಮ್ಮೇಳನಕ್ಕೆ ಬರುವವರು ಕಡ್ಡಾಯವಾಗಿ ಐಡಿ ಕಾರ್ಡ್‌ ಧರಿಸಬೇಕೆಂಬ ನಿಯಮವಿತ್ತು. ಆದರೆ ಮುನೀರ್‌ ಸೇನಾ ಸಮವಸ್ತ್ರ ಧರಿಸಿದ್ದರಿಂದ ಐಡಿ ಕಾರ್ಡ್‌ ಹಾಕಿರಲಿಲ್ಲ.

ಮುನೀರ್‌ ಅವರನ್ನು ಭದ್ರತಾ ಸಿಬ್ಬಂದಿ ತಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Share This Article