ಕೋಲಾರದ ಅಂತರಗಂಗೆ ತಪ್ಪಲಿನಲ್ಲಿ ಬೆಂಕಿ – ಅಪಾರ ಪ್ರಮಾಣದ ಅರಣ್ಯ ನಾಶ

1 Min Read

ಕೋಲಾರ: ಜಿಲ್ಲೆಯ ಹೊರ ವಲಯದ ಪ್ರಸಿದ್ಧ ಅಂತರಗಂಗೆ (Antara Gange) ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ನಡೆದಿದ್ದು, ಅಪಾರ ಪ್ರಮಾಣದ ಕಾಡು (Forest) ನಾಶವಾಗಿದೆ.

ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಆದರೆ ಪ್ರವಾಸಿಗರು ನಡೆದುಕೊಂಡು ಹೋಗುವ ಮಾರ್ಗಮಧ್ಯೆ ಕಿಡಿಗೇಡಿಗಳು ಬೆಟ್ಟದ ಕೆಲವು ಪ್ರದೇಶಗಳಲ್ಲಿ ಬೆಂಕಿ ಹಾಕಿದ್ದಾರೆ. ಇದರಿಂದ ಸುಮಾರು ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ. ಅಲ್ಲದೆ ಅಲ್ಲಿದ್ದ ಸಣ್ಣ-ಪುಟ್ಟ ಪ್ರಾಣಿ ಪಕ್ಷಿಗಳು ಸಹ ಬೆಂಕಿಯಲ್ಲಿ ಬೆಂದು ಹೋಗಿವೆ. ಇದನ್ನೂ ಓದಿ: ಶೃಂಗೇರಿ | ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಮೇಲುಗೈ – ಶಾರದಾಂಬೆ ದರ್ಶನ ಪಡೆದ ಅಭ್ಯರ್ಥಿ ಜೀವರಾಜ್

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಅಂತರಗAಗೆ ಬೆಟ್ಟದಲ್ಲಿ ವಾಸಿಸುವ ಪ್ರಾಣಿ ಸಂಕುಲಕ್ಕೆ ಇದರಿಂದ ಆತಂಕ ಶುರುವಾಗಿದ್ದು, ಪದೆ ಪದೆ ಹೀಗೆ ಬೆಂಕಿ ಹಾಕುತ್ತಿರುವ ಕಾರಣ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇದನ್ನೂ ಓದಿ: ಫ್ಲೈಟ್‌ನಲ್ಲಿ 2 ಬಾರಿ ವಾಂತಿ – ಚೆನ್ನೈನಲ್ಲಿ ಚಲಿಸುತ್ತಿದ್ದ ವಿಮಾನದಿಂದ ಹೊರಕ್ಕೆ ಜಿಗಿದ ಪ್ರಯಾಣಿಕ

Share This Article