ಫೆ.9ರಿಂದ ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ?

1 Min Read

ಬೆಂಗಳೂರು: ಮೆಟ್ರೋ (Namma Metro) ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಫೆಬ್ರವರಿ 9ರಿಂದ ಮತ್ತೆ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ ಇದೆ. ಮೆಟ್ರೋ ದರ ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ.

- Advertisement -

ಬಿಎಂಆರ್‌ಸಿಎಲ್ (BMRCL) ಬೋರ್ಡ್ ಮೀಟಿಂಗ್‌ನಲ್ಲಿ ಶೇ.5 ರಷ್ಟು ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ದರ ಏರಿಕೆ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಮಾಡಬೇಕು. ಕಳೆದ ವರ್ಷ ಫೆಬ್ರವರಿ 9ರಂದು 100%ರಷ್ಟು ಟಿಕೆಟ್ ದರ ಏರಿಕೆ ಆಗಿತ್ತು. ಪ್ರಯಾಣಿಕರ ಆಕ್ರೋಶದಿಂದ 3 ದಿನಗಳ ನಂತರ 70%ಗೆ ಇಳಿಕೆ ಮಾಡಲಾಗಿತ್ತು. ಇದನ್ನೂ ಓದಿ: ಕೇಂದ್ರ ಸಚಿವರಿಗೆ ವಿಶ್ವಾಸಘಾತುಕವೆಂದ ರಾಹುಲ್ ಗಾಂಧಿ – ನೀವು ದೇಶದ ಶತ್ರುವೆಂದ ಸಚಿವ ರವನೀತ್ ಬಿಟ್ಟು

- Advertisement -

ಈ ವರ್ಷ ದರ ಏರಿಕೆ ಮಾಡದಿದ್ದರೆ ಮುಂದಿನ ವರ್ಷ 10%ರಷ್ಟು ದರ ಏರಿಕೆ ಮಾಡಬೇಕಾಗುತ್ತದೆ ಎಂದು ನಮ್ಮ ಮೆಟ್ರೋ ಹೇಳುತ್ತಿದೆ. ಇದನ್ನೂ ಓದಿ: U19 World Cup: ಆರನ್ ಜಾರ್ಜ್ ಶತಕ – ದಾಖಲೆಯ ಚೇಸ್‌ನೊಂದಿಗೆ ಫೈನಲ್‌ಗೆ ಭಾರತ ಲಗ್ಗೆ

- Advertisement -

- Advertisement -

Share This Article