ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

1 Min Read

ಹಾಸನ: ಮೂವರು ಇಟಿಎಫ್ (ETF Staff) ಸಿಬ್ಬಂದಿ ಮೇಲೆ ಕಾಡಾನೆ (Elephant) ದಾಳಿ ಮಾಡಿದ ಘಟನೆ ಬೇಲೂರು (Beluru) ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

- Advertisement -

ಗ್ರಾಮದ ಹಾಸ್ಟೆಲ್ ಹಿಂಭಾಗ ಕಾಡಾನೆ ದಾಳಿ ನಡೆಸಿದೆ. ದಾಳಿಯಲ್ಲಿ ಗಾಯಗೊಂಡ ಗಾರ್ಡ್ ರಮೇಶ್ ಸ್ಥಿತಿ ಗಂಭೀರವಾಗಿದೆ. ಸಿಬ್ಬಂದಿ ವಿಶ್ವ ಹಾಗೂ ಜೀವನ್‌ ಅವರು ಸಹ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮೂರು ದಿನಗಳ ಆಪರೇಷನ್‌ ಯಶಸ್ವಿ – ನರಹಂತಕ ಕಾಡಾನೆ ಸೆರೆ

- Advertisement -

- Advertisement -

ಕಾಡಾನೆಗಳ ಹೆಜ್ಜೆ ಗುರುತು ನೋಡಿಕೊಂಡು, ಚಲನವಲನ ಗಮನಿಸುತ್ತ ರಮೇಶ್, ವಿಶ್ವ ಹಾಗೂ ಜೀವನ್ ತೆರಳುತ್ತಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಮೂವರು ಗಾಯಾಳುಗಳನ್ನು ಹಾಸನ (Hassan) ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಆರು ಕುಮ್ಕಿ ಆನೆಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಪುಂಡಾನೆ – ಸೆರೆ ಬಳಿಕ ಹಗ್ಗ ಕಿತ್ತೆಸೆದು ಕಾಡಿಗೆ ಜೂಟ್‌!

- Advertisement -

Share This Article