ಪಶ್ಚಿಮ ಬಂಗಾಳದಲ್ಲಿ 89.93%, ತಮಿಳುನಾಡಿನಲ್ಲಿ 82.24% ಮತದಾನ

1 Min Read

ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಹಳ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಸಂಜೆ 5 ಗಂಟೆಯವರೆಗಿನ ಅಂಕಿಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ಸುಮಾರು 82.24% ಮತದಾನ ದಾಖಲಾಗಿದೆ.

- Advertisement -

ಪಶ್ಚಿಮ ಬಂಗಾಳದ (West Bengal) ಮೊದಲ ಹಂತದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಇನ್ನೂ ಹೆಚ್ಚಿದ್ದು, ಸುಮಾರು 89.93% ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ.

- Advertisement -

ತಮಿಳುನಾಡಿನಲ್ಲಿ (Tamil Nadu) ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದರೆ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ 152 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಉಳಿದ 142 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ:  West Bengal Elections | ಕಚ್ಚಾ ಬಾಂಬ್ ದಾಳಿ ಬಳಿಕ ಉಲ್ಬಣಗೊಂಡ TMC-AJUP ಕಾರ್ಯಕರ್ತರ ಘರ್ಷಣೆ

- Advertisement -

 

ತಮಿಳುನಾಡಿನ ವೀರಪಾಂಡಿಯಲ್ಲಿ 90.76% ಮತದಾನ ನಡೆದಿದೆ. ಪಶ್ಚಿಮ ಬಂಗಾಳದ ರಘುನಾಥ್ ಗಂಜ್ 95.64%, ಸಂಸೇರ್ ಗಂಜ್- 95.34% ಅತಿ ಹೆಚ್ಚಿನ ಮತದಾನವಾಗಿದೆ.

- Advertisement -

ತಮಿಳುನಾಡಿನ ಕೆಲವು ಕಡೆಗಳಲ್ಲಿ ಇವಿಎಂ (EVM) ದೋಷದಿಂದ ಮತದಾನ ವಿಳಂಬವಾಗಿದ್ದು ಮತದಾನದ ಅವಧಿಯನ್ನು ವಿಸ್ತರಿಸುವಂತೆ ನಟ ವಿಜಯ್ ಅವರ ಪಕ್ಷ ಮನವಿ ಮಾಡಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಏರಿಕೆಯ ಚಿಂತನೆ ಇಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನೌಡಾ ಮತ್ತು ಡೊಮ್ಕಲ್ ಭಾಗಗಳಲ್ಲಿ ಸಣ್ಣಪುಟ್ಟ ಹಿಂಸಾಚಾರ ಮತ್ತು ಘರ್ಷಣೆಗಳು ವರದಿಯಾಗಿದ್ದು, ಚುನಾವಣಾ ಆಯೋಗವು ವರದಿ ಕೇಳಿದೆ. ಅಸನ್ಸೋಲ್ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಶಾಸಕಿ ಅಗ್ನಿಮಿತ್ರ ಪಾಲ್ ಅವರ ಮೇಲೆ ದಾಳಿ ನಡೆದಿದೆ.

ಅಗ್ನಿಮಿತ್ರ ಪಾಲ್ ಅವರು ಮತಗಟ್ಟೆಯಿಂದ ಹೊರಬಂದು ತಮ್ಮ ಕಾರಿನಲ್ಲಿ ಕುಳಿತಿದ್ದಾಗ, ಅನಾಮಧೇಯ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಟೊಯೋಟಾ ಇನ್ನೋವಾ ಕಾರಿನ ಹಿಂಬದಿಗೆ ಕಲ್ಲು ಎಸೆದಿದ್ದು ಗಾಜು ಚೂರಾಗಿದೆ.

Share This Article