ಗೋಮಾಂಸ ಸಾಗಾಟ ಮಾಡ್ತಿದ್ದ ಆರೋಪಿ ಬಂಧನ

1 Min Read

ಮಡಿಕೇರಿ: ಅಕ್ರಮವಾಗಿ ಗೋಮಾಂಸ (Beef) ಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ

- Advertisement -

ಹುಣಸೂರಿನ ರತ್ನಪುರಿ ನಿವಾಸಿ ಜಾಹಿದ್ ಅಹ್ಮದ್ (47) ಬಂಧಿತ ಆರೋಪಿ. ಜಾಹಿದ್‌ ಆಲ್ಟೊ-800 ಕಾರಿನಲ್ಲಿ (ಸಂಖ್ಯೆ KA02 MM 7747) ಅಕ್ರಮವಾಗಿ ಗೋಮಾಂಸ ತುಂಬಿಸಿಕೊಂಡು ಕಾರಿನಲ್ಲಿ ಗೋಣಿಕೊಪ್ಪಲಿನಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ಗ್ರಾಮಾಂತರ ಪೊಲೀಸರು (Virajpet Rural Police) ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್‌ ಇಲಾಖೆಯಲ್ಲಿ ಅಕ್ರಮ, ಹಣಕಾಸು ಆಯೋಗದ 5.5 ಸಾವಿರ ಕೋಟಿ ಅವ್ಯವಹಾರ: ಪಿ ರಾಜೀವ್

- Advertisement -

- Advertisement -

ಕಾರು ಪರಿಶೀಲಿಸಿದಾಗ ಕಾರಿನಲ್ಲಿ 150 ಕೆಜಿ ಗೋಮಾಂಸ ಪತ್ತೆಯಾಗಿದ್ದು, ಇದನ್ನ ವಿರಾಜಪೇಟೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ತರುತ್ತಿದ್ದ ಎನ್ನಲಾಗಿದೆ. ಈತ ಹುಣಸೂರಿನ ರತ್ನಪುರಿ ಯಿಂದ ಮಾಂಸವನ್ನ ತಂದಿರೋದಾಗಿ ಪೊಲೀಸರಿಗೆ ಹೇಳಿದ್ದಾನೆ.

- Advertisement -

ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು, ಗೋಮಾಂಸ ಸಾಗಾಟಕ್ಕೆ ಬಳಸಿದ್ದ ಕಾರನ್ನೂ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಆಪರೇಷನ್ ತ್ರಾಶಿ | 12,000 ಅಡಿ ಎತ್ತರದಲ್ಲಿದ್ದ ಜೈಶ್‌ ಉಗ್ರರ ಅಡಗು ತಾಣ ಪತ್ತೆ

Share This Article