ಬೆಂಗಳೂರಿಗೆ ಮೋದಿ 5,700 ಇ-ಬಸ್‌ ಗಿಫ್ಟ್ – ತೇಜಸ್ವಿ ಸೂರ್ಯ ಹರ್ಷ

1 Min Read

ಬೆಂಗಳೂರು: ಕೇಂದ್ರ ಸರ್ಕಾರ 5,700 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಬಸ್ಸುಗಳನ್ನು (Electric Bus) ಬೆಂಗಳೂರಿಗೆ ನೀಡಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, FAME ಯೋಜನೆಗಳು ಮತ್ತು PM E-ಡ್ರೈವ್ ಮೂಲಕ 21,000 ಕ್ಕೂ ಹೆಚ್ಚು ವಿದ್ಯುತ್ ಬಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿತು. ಇವುಗಳಲ್ಲಿ 5,700 ಕ್ಕೂ ಹೆಚ್ಚು ಬಸ್‌ಗಳನ್ನು ಬೆಂಗಳೂರಿಗೆ ಹಂಚಿಕೆ ಮಾಡಲಾಗಿದೆ ಮತ್ತು 1,221 ಬಸ್‌ಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿ ಇನ್ಮುಂದೆ ಸೇವಾ ತೀರ್ಥ; ರಾಜಭವನಗಳಿಗೆ ಲೋಕಭವನ ಎಂದು ಮರುನಾಮಕರಣ ಮಾಡಿದ ಕೇಂದ್ರ

ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರ ಎಷ್ಟು ಎಲೆಕ್ಟ್ರಿಕ್‌ ಬಸ್ಸುಗಳನ್ನು ಬೆಂಗಳೂರಿಗೆ ನೀಡಿದೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಬೃಹತ್ ಕೈಗಾರಿಕೆ ರಾಜ್ಯ ಖಾತೆ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಉತ್ತರ ನೀಡಿದ್ದಾರೆ.

ಉತ್ತರ ಏನಿದೆ?
ಒಟ್ಟು FAME ನಲ್ಲಿ 425, FAME II ನಲ್ಲಿ 6,862, ಪಿಎಂ ಇ ಡ್ರೈವ್‌ನಲ್ಲಿ 13,800 ಎಲೆಕ್ಟ್ರಿಕ್‌ ಬಸ್ಸುಗಳನ್ನು ನೀಡಲಾಗಿದೆ. ಈ ಪೈಕಿ ಬೆಂಗಳೂರು ನಗರಕ್ಕೆ FAME II ನಲ್ಲಿ 1,221 ಪಿಎಂ ಇ ಡ್ರೈವ್‌ನಲ್ಲಿ 4,500 ಬಸ್ಸುಗಳನ್ನು ನೀಡಲಾಗಿದ್ದು ಈ ಪೈಕಿ 1,221 ಬಸ್ಸುಗಳು ಕಾರ್ಯಾಚರಣೆ ನಡೆಸುತ್ತಿದೆ.

Share This Article