ಪಾಟ್ನಾ: ಈ ಬಾರಿ ಬಿಹಾರದಲ್ಲಿ ನಿರಾಯಾಸವಾಗಿ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದು ಮಹಾಘಟಬಂಧನ್ ಪಕ್ಷದ ಮೈತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾಘಟಬಂಧನ್ ಸ್ಪಷ್ಟ ಬಹುಮತ ಗಳಿಸಲಿದೆ ಎನ್ನುತ್ತಾ ಸಮೀಕ್ಷೆಗಳನ್ನ ತಳ್ಳಿಹಾಕಿದರು. ರಾಜ್ಯದಲ್ಲಿ ನಾವು ಸರ್ಕಾರ ರಚಿಸುತ್ತೇವೆ, ಉದ್ಯೋಗ ರಾಜ್ಯ ಬರುತ್ತೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮೋದಿ – ನಿತೀಶ್ ಜೋಡಿಗೆ ಇಂದು ಅಗ್ನಿಪರೀಕ್ಷೆ – ಗೆದ್ದರೆ ಒಬ್ಬರು ಕಿಂಗ್, ಇನ್ನೊಬ್ಬರು ಕಿಂಗ್ಮೇಕರ್!
Patna, Bihar: RJD leader Tejashwi Yadav says, “Our party workers are alert and present at the counting centers. If any official tries to repeat the mistakes of 2020, crosses their limits, or acts on someone’s directions with malicious intent, the public will give a strong… pic.twitter.com/cbecS7asT7
— IANS (@ians_india) November 13, 2025
ಇದಕ್ಕೂ ಮುನ್ನ, ನಾವು ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ ಅನ್ನೋ ಸಂಪೂರ್ಣ ವಿಶ್ವಾಸ ಇದೆ. ನಿರಾಯಾಸವಾಗಿ ಗೆಲ್ಲುತ್ತೇವೆ. ನಮ್ಮ ಕಾರ್ಯಕರ್ತರು ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಎಚ್ಚರಿಕೆ ವಹಿಸಿದ್ದಾರೆ ಎಂದು ತಿಳಿಸಿದರಲ್ಲದೇ, ಚುನಾವಣಾ ಆಯೋಗ ಮತ ಎಣಿಕೆಯಲ್ಲಿ ನಿಷ್ಪಕ್ಷಪಾತತೆ ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಸರ್ಕಾರ 2020ರಲ್ಲಿ ಮಾಡಿದ ತಪ್ಪನ್ನ ಮತ್ತೆ ಮಾಡಿದ್ರೆ ಅಥವಾ ಸಂವಿಧಾನ ಬಾಹಿರ ಚಟುವಟಿಕೆ ಮಾಡಿದ್ರೆ, ಅಧಿಕಾರ ಮೀರಿ ವರ್ತಿಸಿದ್ರೆ ಜನರೇ ತಕ್ಕ ಉತ್ತರ ಕೊಡ್ತಾರೆ ಎಂಬ ಎಚ್ಚರಿಕೆಯನ್ನೂ ತೇಜಸ್ವಿ ಯಾದವ್ ನೀಡಿದರು. ಇದನ್ನೂ ಓದಿ: ಬಿಹಾರದಲ್ಲಿ ಎನ್ಡಿಎಗೆ ಭಾರೀ ಮುನ್ನಡೆ
ಬಿಹಾರದಲ್ಲಿ ಎನ್ಡಿಎಗೆ ಭಾರೀ ಮುನ್ನಡೆ
ಬಿಹಾರದಲ್ಲಿ 243 ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಬೆಳಗ್ಗೆಯಿಂದಲೇ ಮತ ಎಣಿಕೆ ಶುರುವಾಗಿದ್ದು, ಬೆಳಗ್ಗೆ 9:45ರ ಟ್ರೆಂಡ್ ವೇಳೆ ಎನ್ಡಿಎ 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ 72, ಜನ ಸುರಾಜ್ 2, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
