ದೇವಸ್ಥಾನವನ್ನು ಸ್ಫೋಟಿಸುತ್ತೇವೆ – ಪುರಿ ದೇಗುಲದ ಗೋಡೆ ಮೇಲೆ ಬರಹ

By
1 Min Read

ಭುವನೇಶ್ವರ: ಐತಿಹಾಸಿಕ ಪುರಿ ಜಗನ್ನಾಥ ದೇವಾಲಯದ (Puri Jagannath Temple) ಗೋಡೆಯ ಮೇಲೆ ದೇವಾಲಯವನ್ನು ಸ್ಫೋಟಿಸುವುದಾಗಿ ಭಯೋತ್ಪಾದಕ ದಾಳಿಯ ಬೆದರಿಕೆ ಬರಹ (Threatening Graffiti) ಪತ್ತೆಯಾಗಿದೆ.

- Advertisement -

ದೇವಸ್ಥಾನದ ಪರಿಕ್ರಮ ಮಾರ್ಗದುದ್ದಕ್ಕೂ ಇರುವ ಬುಧಿ ಮಾ ದೇವಾಲಯದ ಗೋಡೆಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಸಂದೇಶ ಪತ್ತೆಯಾಗಿದೆ. ದೇವಾಲಯದ ಒಂದು ಗೋಡೆಯ ಮೇಲೆ ಭಯೋತ್ಪಾದಕರು ದೇವಾಲಯದ ಮೇಲೆ ದಾಳಿ ಮಾಡಿ ನಾಶಪಡಿಸುತ್ತಾರೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಮಿನಿಮಮ್ ಬ್ಯಾಲನ್ಸ್ ಮೊತ್ತ ಇಳಿಸಿದ ICICI ಬ್ಯಾಂಕ್‌

- Advertisement -

- Advertisement -

ಇನ್ನೊಂದು ಗೋಡೆಯ ಮೇಲೆ ಫೋನ್ ನಂಬರ್‌ಗಳನ್ನು ಬರೆದು, ಈ ಸಂಖ್ಯೆಗಳನ್ನು ಸಂಪರ್ಕಿಸದಿದ್ದರೆ ಗಲಭೆಗಳು ನಡೆಯುತ್ತವೆ ಎಂಬ ಎಚ್ಚರಿಕೆ ನೀಡಿದ್ದಾರೆ. ಸದ್ಯ ಸ್ಥಳಕ್ಕೆ ಪುರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

ಅಲ್ಲದೇ ಬೆದರಿಕೆ ಬರಹದ ಹಿಂದಿರುವವರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸದ್ಯ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

Share This Article