ರಾಜ್ಯದ ಹವಾಮಾನ ವರದಿ: 07-05-2024

By
1 Min Read

ಮುಂದಿನ 5 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ (Karnataka) ಹಲವು ಭಾಗಗಳಲ್ಲಿ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ಬೆಂಗಳೂರಿನಲ್ಲಿ (Bengaluru) ಸದ್ಯ ಈಗ ಒಂದು ದಿನ ಭಾರೀ ಬಿಸಿಲು ಇದ್ದರೆ ಮತ್ತೊಂದು ದಿನ ಮಳೆಯಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದೆ.

ಮೇ 6 ರಿಂದ ಮೇ 10 ರವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಮೇ 6ರಂದು ಕರಾವಳಿ ಭಾಗದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದರೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 34-23
ಮಂಗಳೂರು: 33-28
ಶಿವಮೊಗ್ಗ: 38-23
ಬೆಳಗಾವಿ: 38-21
ಮೈಸೂರು: 36-24

ಮಂಡ್ಯ: 36-24
ಮಡಿಕೇರಿ: 29-19
ರಾಮನಗರ: 35-24
ಹಾಸನ: 33-22
ಚಾಮರಾಜನಗರ: 35-24
ಚಿಕ್ಕಬಳ್ಳಾಪುರ: 36-23

ಕೋಲಾರ: 34-24
ತುಮಕೂರು: 36-23
ಉಡುಪಿ: 34-28
ಕಾರವಾರ: 33-27
ಚಿಕ್ಕಮಗಳೂರು: 33-21
ದಾವಣಗೆರೆ: 39-23

ಹುಬ್ಬಳ್ಳಿ: 39-22
ಚಿತ್ರದುರ್ಗ: 38-23
ಹಾವೇರಿ: 39-23
ಬಳ್ಳಾರಿ: 42-27
ಗದಗ: 40-23
ಕೊಪ್ಪಳ: 41-25

ರಾಯಚೂರು: 42-28
ಯಾದಗಿರಿ: 42-28
ವಿಜಯಪುರ: 41-26
ಬೀದರ್: 41-27
ಕಲಬುರಗಿ: 42-28
ಬಾಗಲಕೋಟೆ: 42-26

Share This Article