‘ಹರಿಕಥೆ ಅಲ್ಲ ಗಿರಿ ಕಥೆ’ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ಮದುವೆ ಫೋಟೋಸ್

Public TV
1 Min Read

ಸ್ಯಾಂಡಲ್‌ವುಡ್ (Sandalwood) ನಟಿ ತಪಸ್ವಿನಿ ಪೂಣಚ್ಚ (Thapaswini Poonacha) ಅವರು ಸೈಲೆಂಟ್ ಆಗಿ ಹಸೆಮಣೆ ಏರಿದ್ದಾರೆ. ‘ಹರಿಕಥೆ ಅಲ್ಲ ಗಿರಿ ಕಥೆ’ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿದ್ದ ಕೂರ್ಗ್ ಬ್ಯೂಟಿ ತಪಸ್ವಿನಿ, ರಕ್ಷತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

‘ಹರಿಕಥೆ ಅಲ್ಲ ಗಿರಿ ಕಥೆ’ (Harikathe Ala Girikathe) ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ (Rishab Shetty) ತಪಸ್ವಿನಿ ಜೋಡಿಯಾಗಿ ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಕೊಡಗಿನ ನಟಿ ಗಮನ ಸೆಳೆದಿದ್ದರು. ಸದ್ಯ ರಾಜವರ್ಧನ್‌ಗೆ ನಾಯಕಿಯಾಗಿ ‘ಗಜರಾಮ’ (Gajarama) ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲಿದೆ. ಇದನ್ನೂ ಓದಿ:Kendada Seragu: ‘ಈ ಹುಡುಗಿ ಎಷ್ಟು ಚೆಂದ’ ಎಂದು ಹೆಜ್ಜೆ ಹಾಕಿದ ಹರೀಶ್ ಅರಸು-ಪೂರ್ಣಿಮಾ

ಕೊಡಗಿನ ಕುವರಿ (Coorg) ತಪಸ್ವಿನಿ ಪೂಣಚ್ಚ ಅವರು ಕಳೆದ ಜೂನ್‌ನಲ್ಲಿ ರಕ್ಷತ್ ಮುತ್ತಣ್ಣ ಜೊತೆ ವೈವಾಹಿಕ ಜೀವನಕ್ಕೆ(Wedding) ಕಾಲಿಟ್ಟಿದ್ದರು. ಒಂದು ತಿಂಗಳ ನಂತರ ಇದೀಗ ತಮ್ಮ ಮದುವೆಯ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಕೊಡಗಿನ ಸಂಪ್ರಾದಾಯದಂತೆ ತಪಸ್ವಿನಿ- ರಕ್ಷತ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ನಟಿ ತಪಸ್ವಿನಿ ಅವರು ಕೆಂಪು ಬಣ್ಣದ ಸೀರೆಯಲ್ಲಿ ಕೊಡಗಿನ ಲುಕ್‌ನಲ್ಲಿ ಮಿಂಚಿದ್ದಾರೆ. ವರ ರಕ್ಷತ್ ಅವರು ಬಿಳಿ ಬಣ್ಣ ಶೇರ್ವಾನಿ ಮತ್ತು ಪೇಟ ಧರಿಸಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ನವಜೋಡಿಗೆ ಅಭಿಮಾನಿಗಳು, ಆಪ್ತರು ಶುಭಕೋರಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್