‘ಜೈಲರ್’ ಚಿತ್ರದ ಹಾಡಿನಲ್ಲಿ ತಮನ್ನಾ ಹಾಟ್ ಹಾಟ್

Public TV
2 Min Read

ನ್ನೇನು ಕೆಲವೇ ಹೊತ್ತಿನಲ್ಲಿ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ (Jailer) ಸಿನಿಮಾದ ಹಾಡೊಂದು ಬಿಡುಗಡೆ ಆಗಲಿದೆ. ಸರಿಯಾಗಿ ಸಂಜೆ 6 ಗಂಟೆಗೆ ಈ ಹಾಡು (Song) ರಿಲೀಸ್ ಆಗಲಿದ್ದು, ಅದಕ್ಕೂ ಮುನ್ನ ಪೋಸ್ಟರ್ ಒಂದನ್ನು ಚಿತ್ರತಂಡ ರಿಲೀಸ್ ಮಾಡಲಿದೆ. ಅದರಲ್ಲಿ ನಟಿ ತಮನ್ನಾ (Tamannaah) ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಸಿಬಿಸಿ ದೃಶ್ಯಗಳ ಮೂಲಕವೇ ಸದ್ದು ಮಾಡುತ್ತಿರುವ ಈ ನಟಿ ಜೈಲರ್ ನಲ್ಲೂ ಅದನ್ನು ಮುಂದುವರೆಸಿದ್ದಾರಾ? ಕಾದು ನೋಡಬೇಕು.

ತಮಿಳಿನ (Tamil) ಖ್ಯಾತ ನಟ ರಜನಿಕಾಂತ್ (Rajinikanth) ಮತ್ತು ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ (Jailer) ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮೊನ್ನೆಯಷ್ಟೇ ಈ ಸಿನಿಮಾದ ಡಬ್ಬಿಂಗ್ ಕಾರ್ಯದಲ್ಲೂ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಇದೀಗ ಚಿತ್ರತಂಡ ಮತ್ತೊಂದು ಅಪ್ ಡೇಟ್ ನೀಡಿದ್ದು, ಕೆಲವೇ ಹೊತ್ತಿನಲ್ಲಿ ಸಿನಿಮಾದ ಮೊದಲ ಹಾಡನ್ನು (Song) ರಿಲೀಸ್ ಮಾಡಲಿದೆ.

ಜೈಲರ್ ಸಿನಿಮಾದ ಹಾಡು ಯಾವಾಗ ಎಂದು ರಜನಿಕಾಂತ್ ಅಭಿಮಾನಿಗಳು ಕೇಳುತ್ತಿದ್ದರು. ಬೇಗ ಹಾಡು ರಿಲೀಸ್ ಮಾಡಿ ಎನ್ನುವುದು ಅವರ ಆಗ್ರಹ ಕೂಡ ಆಗಿತ್ತು. ಕೊನೆಗೂ ಚಿತ್ರತಂಡ ಅಭಿಮಾನಿಗಳ ಧ್ವನಿಗೆ ಸ್ಪಂದಿಸಿದೆ. ಮೊದಲ ಹಾಡನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳನ್ನು ಕುಣಿಸುವುದಕ್ಕೆ ಹೊರಟಿದೆ. ಇದನ್ನೂ ಓದಿ:ತಂದೆ ವಿರುದ್ಧವೇ ಕೊಲೆ ಬೆದರಿಕೆ ಆರೋಪ ಮಾಡಿದ ನಟಿ ಅರ್ಥನಾ ಬಿನು

ಶಿವರಾಜ್ ಕುಮಾರ್ (Shivaraj Kumar) ಮತ್ತು ರಜನಿ ಕಾಂಬಿನೇಷನ್ ನ ಮೊದಲ ಸಿನಿಮಾ ಜೈಲರ್. ಇದು ಶಿವಣ್ಣನ 2ನೇ ತಮಿಳು ಸಿನಿಮಾ ಕೂಡ ಹೌದು. ರಜನಿಕಾಂತ್ ಅಳಿಯ ಧನುಷ್ ಜೊತೆ ಶಿವಣ್ಣ ಕ್ಯಾಪ್ಟರ್ ಮಿಲ್ಲರ್ ಎನ್ನುವ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಎರಡು ತಮಿಳು ಸಿನಿಮಾದಲ್ಲಿ ಶಿವಣ್ಣ ಏಕಕಾಲದಲ್ಲಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

 

ಜೈಲರ್ ಸಿನಿಮಾದ ವಿಶೇಷತೆ ಅಂದರೆ, ಕರ್ನಾಟಕದಲ್ಲೂ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಕರ್ನಾಟಕದ ಕಥೆಯನ್ನೂ ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಚಿತ್ರತಂಡ ಈ ಕುರಿತು ಯಾವುದೇ ಮಾಹಿತಿಯನ್ನೂ ನೀಡಿಲ್ಲ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್