– ಯಾರಾಗ್ತಾರೆ ಕೇರಳಂ ಕಿಂಗ್?
ತಿರುವನಂತಪುರಂ: ಕೇರಳಂ ನಲ್ಲಿ (Keralam Election) ನಿರೀಕ್ಷೆಯಂತೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (United Democratic Front – UDF) ಅಧಿಕಾರಕ್ಕೆ ಏರಿದರೂ, ಆಳಿತರೂಢ ಎಲ್‌ಡಿಎಫ್ ಜೊತೆಗೆ ನೇರ ಪೈಪೋಟಿ ಎದುರಿಸಲಿದೆ ಎಂದು ಟುಡೇಸ್ ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.
ಈ ಮೂಲಕ 2016, 2021 ರಲ್ಲಿ ಜಯಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡುವ ಉತ್ಸಾಹದಲ್ಲಿದ್ದ ಪಿಣರಾಯಿ ವಿಜಯನ್ ( Pinarayi Vijayan )ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಕನಸು ಭಗ್ನಗೊಂಡಿದೆ.

140 ಸದಸ್ಯರ ಬಲ ಹೊಂದಿರುವ ಕೇರಳಂ ವಿಧಾನಸಭೆಯ ಅಧಿಕಾರದ ಗದ್ದುಗೆ ಹಿಡಿಯಲು 71 ಬಹುಮತ ಪಡೆಯುವ ಅಗತ್ಯವಿದೆ. ಕಾಂಗ್ರೆಸ್ ನೇತೃತ್ವದ 69 ± 9 ಸ್ಥಾನಗಳನ್ನು (40% ± 3% ವೋಟ್) ಗೆಲ್ಲುವ ನಿರೀಕ್ಷೆಯಿದೆ ಎಂದು ಟುಡೇಸ್ ಚಾಣಕ್ಯ ಸಮೀಕ್ಷೆ ಹೇಳಿದೆ. ಇನ್ನೂ ಆಡಳಿತಾರೂಢ ಎಲ್‌ಡಿಎಫ್ 64 ± 9 ಸ್ಥಾನಗಳಲ್ಲಿ (38% ± 3% ವೋಟ್) ಗೆಲುವು ಸಾಧಿಸಿದ್ರೆ, ಬಿಜೆಪಿ 7 ± 4 ಸ್ಥಾನಗಳಲ್ಲಿ (20% ± 3% ಮತ) ಗೆಲ್ಲುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ಹೇಳಿದೆ. ಇತರರು 2% ± 1% ಮತಗಳನ್ನು ಪಡೆದು 1 ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ.
2021 ರಲ್ಲಿ ಏನಾಗಿತ್ತು?
ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ 40 ವರ್ಷಗಳ ಸಂಪ್ರದಾಯವನ್ನು ಮುರಿದು ಎಡರಂಗ (LDF) ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿತ್ತು. ಎಲ್‌ಡಿಎಫ್ 99, ಯುಡಿಎಫ್ 41 ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿ ಖಾತೆ ತೆರೆಯಲು ವಿಫಲವಾಗಿತ್ತು. ಪಿಣರಾಯಿ ವಿಜಯನ್ ಅವರು ಪೂರ್ಣಾವಧಿ ಮುಗಿಸಿ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು.

ಇತರ ಸಮೀಕ್ಷೆಗಳು ಹೇಳೋದೇನು?
ಸ್ಮಾರ್ಟ್ ಪೋಲ್:
ಯುಡಿಎಫ್ 85
ಎಲ್‌ಡಿಎಫ್ 51
ಬಿಜೆಪಿ 3
ಇತರೆ 1
ನ್ಯೂಸ್18
ಯುಡಿಎಫ್ 70-80
ಎಲ್‌ಡಿಎಫ್ 58-68
ಬಿಜೆಪಿ 4
ಇತರೆ 00

ಎಕ್ಸಿಸ್ ಮೈ ಇಂಡಿಯಾ
ಎಲ್‌ಡಿಎಫ್ 49-62
ಯುಡಿಎಫ್ 78-90
ಬಿಜೆಪಿ 0-3
ಇತರೆ 00
ಟೈಮ್ಸ್ ನೌ:
ಎಲ್‌ಡಿಎಫ್ 52-61
ಯುಡಿಎಫ್ 72-84
ಬಿಜೆಪಿ 3-7
ಇತರೆ 00

