7ನೇ ಮಹಡಿಯಲ್ಲಿರೋ ಪತಿ ಬೆಡ್ ರೂಮಿನಿಂದ ಜಿಗಿದ ನವ ವಿವಾಹಿತೆ

Public TV
2 Min Read

– 6 ವರ್ಷದ ಮಗಳಿದ್ರೂ 2ನೇ ಮದ್ವೆಯಾಗಿದ್ದ ಮಹಿಳೆ
– ಬ್ಲ್ಯಾಕ್‍ಮೇಲ್ ಮೆಸೇಜ್, ಕರೆ

ರಾಯ್ಪುರ: ನವ ವಿವಾಹಿತೆ ಏಳನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿರುವ ಘಟನೆ ಛತ್ತೀಸಗಢದ ದುರ್ಗ ಜಿಲ್ಲೆಯ ಪದ್ಮಾನಭಪುರ ಇಲಾಖೆಯ ಆನಂದ್ ವಿಹಾರ ಕಾಲೋನಿಯಲ್ಲಿ ನಡೆದಿದೆ. ಮೃತ ಮಹಿಳೆ 39 ದಿನಗಳ ಹಿಂದೆ ಮದುವೆ ಆಗಿದ್ದರು.

25 ವರ್ಷದ ಪ್ರೀತಿ ಆತ್ಮಹತ್ಯೆಗೆ ಶರಣಾದ ಮಹಿಳೆ. 39 ದಿನಗಳ ಹಿಂದೆ ಡಾ.ಮಹೇಂದ್ರ ದೇವಾಂಗನ್ ಎಂಬವರನ್ನ ಪ್ರೀತಿಸಿ ಕೋರ್ಟ್ ನಲ್ಲಿ ಮದುವೆಯಾಗಿದ್ದರು. ಭಾನುವಾರ ಊಟದ ಬಳಿಕ ಪತಿಯ ಕೋಣೆ ಸೇರಿದ ಪ್ರೀತಿ ಬಾಗಿಲು ಹಾಕಿಕೊಂಡು ಕಿಟಕಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ:  ಜ್ಯೋತಿಷಿ ಮಾತು ಕೇಳಿ ಪತ್ನಿಗೆ ಕಿರುಕುಳ – ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ

ನಾವಿಬ್ಬರು ರಾತ್ರಿ ಸುಮಾರು 9.30ಕ್ಕೆ ಜೊತೆಯಾಗಿಯೇ ಊಟ ಮಾಡಿದೇವು. ಊಟದ ವೇಳೆ ಪತ್ನಿ ಒತ್ತಡದಲ್ಲಿರೋದು ಗಮನಕ್ಕೆ ಬಂದಿತ್ತು. ಊಟದ ಬಳಿಕ ಹಾಸಿಗೆ ಹಾಕಲು ಒಳಹೋದ ಪ್ರೀತಿ ಬಾಗಿಲು ಹಾಕಿಕೊಂಡಳು. ನಾನು ಎರಡ್ಮೂರು ಬಾರಿ ಕೂಗಿದರು ಉತ್ತರ ನೀಡಲಿಲ್ಲ. ಆಕೆ ಕೆಳಗೆ ಬಿದ್ದಿರೋದು ನಂತರ ತಿಳಿಯಿತು ಎಂದು ಪ್ರೀತಿ ಪತಿ ಮಹೇಂದ್ರ ಪೊಲೀಸರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ಮಾಡಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ– ಚಲಿಸುತ್ತಿರುವ ರೈಲಿನ ಮುಂದೆ ಹಾರಿದ್ರು

ಪ್ರೀತಿಗೆ ಎರಡನೇ ಮದುವೆ: ಮೃತ ಪ್ರೀತಿಗೆ ಈಗಾಗಲೇ ಆರು ವರ್ಷದ ಮಗಳಿದ್ದು, ಆಕೆಯನ್ನ ಅಜ್ಜಿಯ ಜೊತೆ ಬಿಹಾರದಲ್ಲಿರುವ ಸೋದರಿ ಮನೆಗೆ ಕಳುಹಿಸಿದ್ದಳು. ಅಕ್ಟೋಬರ್ ಎಂಟರಂದು ಪ್ರೀತಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಮಹೇಂದ್ರರನ್ನ ಮದುವೆ ಆಗಿದ್ದರು. ಇದನ್ನೂ ಓದಿ: ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

ಒಂದು ವರ್ಷದ ಹಿಂದೆ ನರ್ಸ್ ಆಗಿದ್ದ ಪ್ರೀತಿಗೆ ಆಸ್ಪತ್ರೆಯಲ್ಲಿ ವೈದ್ಯ ಮಹೇಂದ್ರ ಪರಿಚಯವಾಗಿದ್ದರು. ಸ್ನೇಹ ಪ್ರೇಮದ ಬಾಗಿಲು ತೆರೆದಾಗ ಇಬ್ಬರೂ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಆದ್ರೆ ಪ್ರೀತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿಯೂ ಯಾವುದೇ ಡೆತ್ ನೋಟ್ ಲಭ್ಯವಾಗದ ಹಿನ್ನೆಲೆ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾದ 8 ದಿನಕ್ಕೆ ನವ ವಿವಾಹಿತೆ ಆತ್ಮಹತ್ಯೆ– ಹಬ್ಬಕ್ಕೆ ಕರ್ಕೊಂಡು ಬರಲು ಹೋದಾಗ ರಹಸ್ಯ ಬಯಲು

ಫೋನ್ ನೀಡಿದ ಸುಳಿವು: ಮನೆಯಲ್ಲಿಯೂ ಯಾವುದೇ ಡೆತ್ ನೋಟ್ ಲಭ್ಯವಾಗದ ಹಿನ್ನೆಲೆ ಪೊಲೀಸರು ಪ್ರೀತಿ ಬಳಸುತ್ತಿದ್ದ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಿದ್ದರು. ಪ್ರೀತಿಗೆ ಕೆಲ ದಿನಗಳಿಂದ ಬ್ಲಾಕ್‍ಮೇಲ್ ಮೆಸೇಜ್ ಮತ್ತು ಕರೆಗಳು ಬರುತ್ತಿರೋದ ಬೆಳಕಿಗೆ ಬಂದಿದೆ. ಆದ್ರೆ ಮೊಬೈಲ್ ಡ್ಯಾಮೇಜ್ ಆಗಿದ್ದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ತನಿಖೆ ಪ್ರಗತಿಯಲ್ಲಿ ಇರೋದರಿಂದ ಪೊಲೀಸರು ಪ್ರಕರಣದ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ನವ ವಿವಾಹಿತೆ ತಾಳಿ, ಕಾಲುಂಗುರ ತೆಗೆಸಿದ ಪೊಲೀಸ್ರು?

ಮಹಿಳೆಯೊಬ್ಬರು ಕಟ್ಟಡದಿಂದ ಜಿಗಿದಿದ್ದಾರೆ ಅಂತಾ ಗೊತ್ತಾಗುತ್ತಲೇ ನಾನು ಓಡಿ ಹೋದೆ. ಕೂಡಲೇ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ರೂ ವೈದ್ಯರು ಮೃತಪಟ್ಟಿರೋದನ್ನ ಖಚಿತಪಡಿಸಿದರು. ಮಹಿಳೆಯ ಪತಿ ಸಹ ವೈದ್ಯರಾಗಿದ್ದರಿಂದ ಅವರು ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದರ ಎಂದು ಅಪಾರ್ಟ್ ಮೆಂಟ್ ಸೆಕ್ಯುರಿಟಿ ಗಾರ್ಡ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *