ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104ರ ವೃದ್ಧೆಯ ಸ್ಫೂರ್ತಿದಾಯಕ ಕಥೆ

Public TV
2 Min Read
old women

ತಿರುವನಂತಪುರ: ಕೇರಳದ ವೃದ್ಧೆಯೊಬ್ಬರು ಪರೀಕ್ಷೆ ಬರೆದು 100ಕ್ಕೆ 89 ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಯಸ್ಸು ಕೇವಲ ಸಂಖ್ಯೆಯಷ್ಟೇ. ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಈ ಕಥೆ ಒಂದು ಸಾಕ್ಷಿಯಾಗಿದೆ. ಕೊಟ್ಟಾಯಂನ ಅಯರ್ಕುನ್ನಂ ಪಂಚಾಯತ್‍ನಲ್ಲಿ ‘ಸಾಕ್ಷರತಾ’ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಗೆ 104 ವರ್ಷದ ಕುಟ್ಟಿಯಮ್ಮ ಅವರು ಹಾಜರಾಗಿ ಪರೀಕ್ಷೆ ಬರೆದು 100 ಅಂಕಗಳಿಗೆ 89 ಅಂಕಗಳನ್ನು ಗಳಿಸಿದ್ದಾರೆ. ಇದನ್ನೂ ಓದಿ:   ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

school class college

ಈ ಕುರಿತಂತೆ ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್‍ಕುಟ್ಟಿ ಅವರು ತಮ್ಮ ಟ್ವಿಟ್ಟರ್‍ನಲ್ಲಿ ಕುಟ್ಟಿಯಮ್ಮನ ಫೋಟೋವನ್ನು ಪೆÇೀಸ್ಟ್ ಮಾಡಿದ್ದಾದ್ದು, 104 ವರ್ಷದ ಕೊಟ್ಟಾಯಂನ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್‍ನ ಪರೀಕ್ಷೆಯಲ್ಲಿ 89/100 ಅಂಕಗಳನ್ನು ಗಳಿಸಿದ್ದಾರೆ. ಜ್ಞಾನದ ಜಗತ್ತನ್ನು ಪ್ರವೇಶಿಸಲು ವಯಸ್ಸು ಅಡ್ಡಿಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ, ಕುಟ್ಟಿಯಮ್ಮ ಮತ್ತು ಹೊಸದಾಗಿ ಕಲಿಯುವವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ

ಕುಟ್ಟಿಯಮ್ಮ ಅವರು ತಮ್ಮ ಜೀವನದಲ್ಲಿ ಶಾಲೆಗೆ ಹೋಗದೇ ಇರುವುದರಿಂದ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಸಾಕ್ಷರತಾ ಪ್ರೇರಕ ರೆಹನಾ ಕಾರ್ಯಕ್ರಮದ ಮೂಲಕ ಬರೆಯುವುದನ್ನು ಕಲಿತರು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಮ್ಮ ಮನೆಯಲ್ಲಿಯೇ ತರಗತಿಗೆ ಹಾಜರಾಗುತ್ತಿದ್ದರು. ತರಗತಿಗಳಿಗೆ ಹಾಜರಾದ ನಂತರ ಕುಟ್ಟಿಯಮ್ಮ ನಾಲ್ಕನೇ ತರಗತಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾದರು. 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರಿಗೆ ಕಿವಿ ಕೇಳಿಸುವುದಿಲ್ಲ, ಆದ್ದರಿಂದ ಅವರು ಪರೀಕ್ಷೆ ವೇಳೆ ಗಟ್ಟಿಯಾಗಿ ಮಾತನಾಡುವಂತೆ ಇನ್ವಿಜಿಲೇಟರ್‍ಗಳಿಗೆ ಮನವಿ ಮಾಡಿದ್ದರು. ಸದ್ಯ ಕುಟ್ಟಿಯಮ್ಮ ಅವರ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸಿದ Miss Bumbum 2021

Share This Article