ಒಂದು ಮನೆ, ಐದು ಕೋಣೆ- ಸೆಕ್ಸ್ ನಲ್ಲಿ ತೊಡಗಿದ್ದ 5 ಜೋಡಿಯ ಬಂಧನ

Public TV
1 Min Read

– ಸೆಕ್ಸ್ ದಂಧೆಯ ಸಂಚಾಲಕಿ ಜೂಟ್
– ಐವರು ಯುವತಿಯರು ಸೇರಿದಂತೆ 10 ಜನ ಅರೆಸ್ಟ್

ಲಕ್ನೋ: ಸೆಕ್ಸ್ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರನ್ನ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಅಬ್ದುಲಪುರವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇಹಾತ್ ಗ್ರಾಮದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಸೋಮವಾರ ತಡರಾತ್ರಿ ಪೊಲೀಸರು ಗ್ರಾಮದಲ್ಲಿರುವ ಮನೆ ಮೇಲೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಮನೆಯ ಐದು ಕೋಣೆಗಳಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ 10 ಜನರನ್ನು ಬಂಧಿಸಿದ್ದಾರೆ. ಇತ್ತ ದಾಳಿ ಬಳಿಕ ಸೆಕ್ಸ್ ದಂಧೆಯ ಸಂಚಾಲಕಿ ಸರೋಜಿನಿ ಗೌತಮ್ ಸ್ಥಳದಿಂದ ಜೂಟ್ ಆಗಿದ್ದಾಳೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಲವ್ವರ್ ಜೊತೆ ಸೆಕ್ಸ್ ನಲ್ಲಿದ್ದಾಗ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ..!

ಬಂಧಿತ ಐವರು ಯುವತಿಯರಲ್ಲಿ ಇಬ್ಬರು ಕೋಲ್ಕತ್ತಾ ಮೂಲದವರು ಎಂದು ಹೇಳಿದ್ದಾರೆ. ಇನ್ನುಳಿದ ಮೂವರು ಸರೋಜಿನಿಯ ಸಂಬಂಧಿಗಳು ಎಂದು ವಿಚಾರಣೆ ವೇಳೆ ಹೇಳಿಕೆ ದಾಖಲಿಸಿದ್ದಾರೆ. ಬಂಧಿತ ಐವರು ಯುವಕರು ಸೆಕ್ಸ್ ಅಡ್ಡಾಗೆ ಬಂದ ಗ್ರಾಹಕರು ಎಂದು ವರದಿಯಾಗಿದೆ. ಇದನ್ನೂ ಓದಿ: ವಿಮಾನ ಆಟೋ-ಪೈಲೆಟ್ ಮೋಡ್‍ನಲ್ಲಿಟ್ಟು 15ರ ಬಾಲಕಿ ಜೊತೆ ಕೋಟ್ಯಧಿಪತಿ ಸೆಕ್ಸ್!

ದಂಧೆಯ ಸಂಚಾಲಕಿ ಗ್ರಾಮ ಪಂಚಾಯ್ತಿ ಪೌರ ಕಾರ್ಮಿಕ ಮಹಿಳೆಯಾಗಿ ಕೆಲಸ ಮಾಡಿಕೊಂಡಿದ್ದಾಳೆ. ಈ ಹಿಂದೆಯೂ ಮಾಂಸ ದಂಧೆ ಪ್ರಕರಣದಲ್ಲಿ ಸರೋಜಿನಿ ಜೈಲು ಶಿಕ್ಷೆ ಅನುಭವಿಸಿದ್ದಳು. ಜೈಲಿನಿಂದ ಹೊರ ಬಂದ ನಂತರವೂ ಹಳೆ ದಂಧೆ ಮುಂದುವರಿಸಿದ್ದಳು. ಶೀಘ್ರದಲ್ಲೇ ಪರಾರಿಯಾಗಿರುವ ಸರೋಜಿನಿಯನ್ನ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಕಾಸ್ ಜಯಸ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ಸೆಕ್ಸ್ ನಲ್ಲಿ ತೊಡಗಿದ್ದಾಗ ಮಂಚ ಮುರಿತ- ಬೆಡ್ ಕಂಪನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ

ಬಂಧಿತ ಯುವಕ ಮತ್ತು ಯುವತಿಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತ ಎಲ್ಲರನ್ನು ಜೈಲುಪಾಲಾಗಿದ್ದಾರೆ. ದಂಧೆಯ ಸಂಚಾಲಕಿ ಆಗಿರೋ ಸರೋಜಿನಿ ವಿರುದ್ಧ ಗ್ಯಾಂಗ್‍ಸ್ಟರ್ ಕಾಯ್ದೆಯಡಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಕಾರಿನಲ್ಲಿ ಸೆಕ್ಸ್ ನಿರಾಕರಿಸಿದ್ದಕ್ಕೆ ಪ್ರೇಮಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು!

Share This Article
Leave a Comment

Leave a Reply

Your email address will not be published. Required fields are marked *