ಬೆಂಗಳೂರು: ಇನ್ನೇನು ಕೆಲ ದಿನಗಳಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಭಾರೀ ಬೆಳವಣಿಗೆಗಳು ಆಗುತ್ತಿವೆ. ಈ ಮಧ್ಯೆ ಮಾಜಿ ಸಂಸದೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು `ಅಪ್ನಾ ಟೈಂ ಆಯೇಗಾ’ ಎಂದು ಹೇಳಿದ್ದಾರೆ.
ಹೌದು. ರಮ್ಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಅವರು ನಗುನಗುತ್ತಾ ಕೈ ಮುಗಿಯುತ್ತಿರುವ ಫೋಟೋವೊಂದನ್ನು ಫೋಸ್ಟ್ ಮಾಡಿ, ನಮ್ಮ ಸಮಯ ಬರುತ್ತಾ ಇದೆ ಎಂದು ಬರೆದುಕೊಂಡಿದ್ದಾರೆ.
Apna time aayega! pic.twitter.com/TA7J12o46d
— Ramya/Divya Spandana (@divyaspandana) February 3, 2019
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಿಸುವ ಕೊನೆಯ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದು, ಆಪರೇಷನ್ ಲೋಟಸ್ ಯಶಸ್ಸಿಗೆ ನಗರದ ಬಿಇಎಲ್ ವೃತ್ತದ ಬಳಿಯ ಗಣಪತಿ ದೇವಸ್ಥಾನದಲ್ಲಿ ಗರುಡಚಯನ ಯಾಗ ನಡೆಸುತ್ತಿದೆ. ಭಾನುವಾರವಷ್ಟೇ ಈ ಬಾರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಬಜೆಟ್ ಮಂಡನೆ ಮಾಡುವುದು ಡೌಟ್ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಹೆಳಿಕೆ ನೀಡಿದ್ದು, ಇದೀಗ ಭಾರೀ ಚರ್ಚೆಗೀಡಾಗಿದೆ.
ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿರುವ ಕುರಿತು ಇಂದು ರಾಜರಾಜೇಶ್ವರಿ ಶಾಸಕ ಮುನಿರತ್ನ ಅವರು ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿಯೇ ಮಾಡುತ್ತಾರೆ. ಒಂದು ವೇಳೆ ಅವರು ಬಜೆಟ್ ಮಂಡನೆ ಮಾಡದಿದ್ದರೆ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾವನ್ನು 5 ಕೋಟಿಗೆ ಬಿಜೆಪಿಯವರಿಗೆ ಬಿಟ್ಟುಕೊಡುವುದಾಗಿ ಸವಾಲೆಸೆದಿದ್ದಾರೆ.
ಪ್ರಕೃತಿ ವಿಕೋಪದಂತಹ ದುರಂತಗಳು ಸಂಭವಿಸದಂತೆ, ಮಳೆ-ಬೆಳೆಗಾಗಿ ಹೋಮ-ಹವನಗಳನ್ನು ಮಾಡಿ. ಅಧಿಕಾರದ ಆಸೆಗೆ ಹೋಮಗಳನ್ನು ಮಾಡಬೇಡಿ. ಇದನ್ನು ದೇವರು ಮೆಚ್ಚಲ್ಲ ಎಂದು ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv