ಬೆಂಗಳೂರು: ರಾಜ್ಯದಲ್ಲಿ ಯಾವ ರೈತರು (Farmers) ಎಪಿಎಂಸಿ (APMC) ಕಾಯ್ದೆ ವಾಪಸ್ ಪಡೆಯುವಂತೆ ಮನವಿ ಮಾಡಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿ ಆಗಿರೋ ಎಪಿಎಂಸಿ ಕಾಯ್ದೆ ರದ್ದು ಮಾಡೋದಿಲ್ಲ ಅಂತ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ (ST Somashekar) ಸ್ಪಷ್ಟಪಡಿಸಿದ್ದಾರೆ.
Advertisement
ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ (APMC Act) ರದ್ದು ಮಾಡಬೇಕು, ಈ ಕಾಯ್ದೆಯಿಂದ ರೈತರಿಗೆ ಅನ್ಯಾಯ ಆಗುತ್ತದೆ. ಕೇಂದ್ರ ಸರ್ಕಾರ ಈಗಾಗಲೇ ಕಾಯ್ದೆ ರದ್ದು ಮಾಡಿದೆ. ಡಬಲ್ ಎಂಜಿನ್ ಸರ್ಕಾರ ಇಲ್ಲಿ ಬೇರೆ ನಿರ್ಧಾರ ಮಾಡಿದೆ. ಕೂಡಲೇ ಕಾಯ್ದೆ ರದ್ದು ಮಾಡಬೇಕೆಂದು ಒತ್ತಾಯಿಸಿದರು.
Advertisement
ಇದಕ್ಕೆ ಉತ್ತರಿಸಿದ ಎಸ್.ಟಿ ಸೋಮಶೇಖರ್, ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯ್ದೆ ರಾಜ್ಯದಲ್ಲಿ ವಾಪಸ್ ಪಡೆಯಲ್ಲ (ರದ್ದು ಮಾಡುವುದಿಲ್ಲ) ಎಂದು ಪುನರುಚ್ಚರಿಸಿದರು. ಇದನ್ನೂ ಓದಿ: ಅಕ್ಟೋಬರ್ 2 ರಿಂದ ಯಶಸ್ವಿನಿ ಯೋಜನೆ ಜಾರಿ: ಎಸ್.ಟಿ.ಸೋಮಶೇಖರ್
Advertisement
Advertisement
ಕೇಂದ್ರದ ಕಾಯ್ದೆ ಬೇರೆ ನಮ್ಮ ಕಾಯ್ದೆ ಬೇರೆ. ರೈತರಿಗೆ ಅನುಕೂಲ ಮಾಡಲು ಕಾಯ್ದೆ ತಿದ್ದುಪಡಿ ಮಾಡಿದ್ದೇವೆ. ರೈತರು ತಮ್ಮ ಬೆಳೆ (Crop) ಎಪಿಎಂಸಿಯಲ್ಲಿ ಬೇಕಾದರೂ ಮಾರಾಟ ಮಾಡಬಹುದು ಅಥವಾ ಎಲ್ಲಿ ಬೇಕಾದ್ರು ಖಾಸಗಿಯಾಗಿ ಬೇಕಾದ್ರು ಮಾರಾಟ ಮಾಡಬಹುದು. ಅದಕ್ಕಾಗಿಯೇ ನಾವು ಕಾಯ್ದೆ ತಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಣ್ಣಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮನ ನೆರವಿಗೆ ನಿಂತ ಸಚಿವೆ ಜೊಲ್ಲೆ
ಇದಲ್ಲದೆ ರೈತ ಎಪಿಎಂಸಿ ಬಿಟ್ಟು ಹೊರಗೆ ಮಾರಾಟ ಮಾಡಿದರೆ ಮೊದಲು ದಂಡ ಇತ್ತು. ಅದನ್ನ ಈ ಕಾಯ್ದೆ ಮೂಲಕ ತೆಗೆದು ಹಾಕಲಾಗಿದೆ. ರಾಜ್ಯದ ಯಾವ ರೈತರು ಕಾಯ್ದೆ ವಾಪಸ್ ಪಡೆಯುವಂತೆ ಮನವಿ ಮಾಡಿಲ್ಲ. ಈ ಕಾಯ್ದೆ ರೈತರ ಪರವಾದ ಕಾಯ್ದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯ್ದೆ ವಾಪಸ್ ಪಡೆಯೊಲ್ಲ ಅಂತ ಸ್ಪಷ್ಟಪಡಿಸಿದರು.