ನವದೆಹಲಿ: ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲು ಸಮಿತಿ ರಚಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಇಂದು ನಡೆದ ವಿಚಾರಣೆ ವೇಳೆ ಸಿಜೆಐ ಪೀಠ ಇಂತದೊಂದು ಅಭಿಪ್ರಾಯ ಕೋರ್ಟ್ ವ್ಯಕ್ತಪಡಿಸಿದೆ.
ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮ ಬೀರುವುದರಿಂದ ಉಚಿತ ಕೊಡುಗೆಗಳ ಸಾಧಕ-ಬಾಧಕಗಳನ್ನು ನಿರ್ಧರಿಸುವ ಅಗತ್ಯವಿದೆ. ಹೀಗಾಗಿ ಸಮಿತಿಯಲ್ಲಿ ನೀತಿ ಆಯೋಗ, ಹಣಕಾಸು ಆಯೋಗ, ಆಡಳಿತ ಮತ್ತು ವಿರೋಧ ಪಕ್ಷಗಳು, ಆರ್‍ಬಿಐ ಮತ್ತು ಇತರ ಮಧ್ಯಸ್ಥಗಾರರು ಒಳಗೊಂಡಿರಬೇಕು ಎಂದು ಸಿಜೆಐ ಎನ್‍ವಿ ರಮಣ ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು
ಪ್ರಸ್ತಾಪಿತ ಸಮಿತಿಯೂ ಉಚಿತ ಕೊಡುಗೆಗಳನ್ನು ಹೇಗೆ ನಿಯಂತ್ರಿಸುವುದು ಮತ್ತು ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಕೋರ್ಟ್‍ಗೆ ವರದಿಗಳನ್ನು ನೀಡಬೇಕು ಎಂದು ಪೀಠ ಹೇಳಿದೆ. ತಜ್ಞರ ಸಮಿತಿಯ ರಚನೆಯ ಕುರಿತು ಏಳು ದಿನಗಳಲ್ಲಿ ತಮ್ಮ ಸಲಹೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಹಾಗೂ ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮತ್ತು ಅರ್ಜಿದಾರರಿಗೆ ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ಚುನಾವಣಾ ಆಯೋಗದ “ನಿಷ್ಕ್ರಿಯತೆ”ಯಿಂದ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಇದಕ್ಕೆ ಉತ್ತರಿಸಿದ ಆಯೋಗದ ಪರ ವಕೀಲರು ಉಚಿತಗಳ ಮೇಲಿನ ನ್ಯಾಯಾಲಯದ ತೀರ್ಪಿನಿಂದ ತನ್ನ ಕೈಗಳನ್ನು ಕಟ್ಟಲಾಗಿದೆ ಎಂದು ಹೇಳಿದರು. ಇದಕ್ಕೆ ಮತ್ತೆ ಉತ್ತರಿಸಿದ ಕೋರ್ಟ್ ಅಗತ್ಯಬಿದ್ದರೆ ಹಳೆಯ ತೀರ್ಪನ್ನು ಮರುಪರಿಶೀಲಿಸುವುದಾಗಿ ಹೇಳಿದೆ. ಇದನ್ನೂ ಓದಿ: ವರ್ಷದ ಹಿಂದೆ ಅತ್ಯಾಚಾರಗೈದು ಜೈಲು ಸೇರಿದ್ದವನಿಂದ ಮತ್ತೆ ರೇಪ್ – ಸ್ನೇಹಿತನಿಂದಲೇ ಕೃತ್ಯ ಸೆರೆ
ಈ ವೇಳೆ ಮಧ್ಯಪ್ರವೇಶ ಮಾಡಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಕಾನೂನು ಜಾರಿಗೊಳಿಸಲು ಸಂಸತ್ತಿಗೆ ಬಿಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಜೆಐ ಯಾವುದೇ ರಾಜಕೀಯ ಪಕ್ಷವು ಉಚಿತ ಕೊಡುಗೆಗಳ ನಿರ್ಧಾರದ ವಿರುದ್ಧ ನಿಲ್ಲುವುದಿಲ್ಲ ಎಂದು ಹೇಳಿದರು.
ಮುಂದುವರಿದು ಇದರ ಬಗ್ಗೆ ಸಂಸತ್ತು ಚರ್ಚೆ ನಡೆಸುತ್ತದೆ ಎಂದು ನೀವು ಭಾವಿಸುತ್ತೀರಾ? ಯಾವ ರಾಜಕೀಯ ಪಕ್ಷವು ಚರ್ಚೆ ನಡೆಸುತ್ತದೆ? ಯಾವುದೇ ರಾಜಕೀಯ ಪಕ್ಷವು ಉಚಿತಗಳನ್ನು ವಿರೋಧಿಸುವುದಿಲ್ಲ. ಪ್ರತಿಯೊಬ್ಬರೂ ಅದನ್ನು ಬಯಸುತ್ತಾರೆ. ನಾವು ತೆರಿಗೆ ಪಾವತಿದಾರರು ಮತ್ತು ದೇಶದ ಆರ್ಥಿಕತೆಯ ಬಗ್ಗೆ ಯೋಚಿಸಬೇಕು ಎಂದು ಸಿಜೆಐ ರಮಣ, ವಕೀಲ ಕಪಿಲ್ ಸಿಬಲ್‍ಗೆ ತಿಳಿಸಿದರು.