ಭಾರೀ ಮಳೆಗೆ ಮನೆ ಮೇಲೆ ಕುಸಿದ ಅಪಾರ್ಟ್‍ಮೆಂಟ್ ಗೋಡೆ- ನಾಲ್ವರ ರಕ್ಷಣೆ

Public TV
1 Min Read
vlcsnap 2017 09 27 08h59m17s143

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾ ಮಳೆ ಅವಾಂತವನ್ನೇ ಸೃಷ್ಟಿಸಿದೆ. ಮನೆ ಮೇಲೆ ಅಪಾರ್ಟ್‍ಮೆಂಟ್‍ ವೊಂದರ ಗೋಡೆ ಕುಸಿದು ಬಿದ್ದ ಘಟನೆ ಜೆ.ಪಿ ನಗರದ ಐದನೇ ಬ್ಲಾಕ್‍ನಲ್ಲಿ ನಡೆದಿದೆ.

vlcsnap 2017 09 27 09h00m19s14

ಶೋಭ ಡಿಪ್ಲೋರ್ ಅಪಾರ್ಟ್‍ಮೆಂಟ್‍ ನ ಗೋಡೆ ಮನೆ ಮೇಲೆ ಕುಸಿದಿತ್ತು. ಗೋಡೆ ಕುಸಿತದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಮನಯಲ್ಲೇ ಸಿಲುಕಿದ್ದರು. ಮನೆಯಲ್ಲಿ ನಾಲ್ಕು ಮಂದಿ ವಾಸವಿದ್ದರು. ಮನೆ ಬಾಗಿಲ ಮೇಲೆ ಗೋಡೆ ಕುಸಿದ ಪರಿಣಾಮ ಹೊರಬರಲಾರದೆ ಪರದಾಡಿದ್ರು. ಮಧ್ಯಾರಾತ್ರಿ ಎರಡು ಗಂಟೆಗೆ ಸ್ಥಳಕ್ಕೆ ಅಧಿಕಾರಿಗಳು ಬಂದು ಹೋಗಿ, ಮುಂಜಾನೆ ನಂತರ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ರು. ಸದ್ಯ ಕುಟುಂಬವನ್ನ ರಕ್ಷಣೆ ಮಾಡಲಾಗಿದೆ.

vlcsnap 2017 09 27 09h00m03s98

ಅಪಾರ್ಟ್‍ಮೆಂಟ್ ಪಕ್ಕದಲ್ಲೆ ರಾಜಕಾಲುವೆ ಹೋಗುತ್ತದೆ. ಎರಡು ಮನೆಯ ಮೇಲೆ ಗೋಡೆ ಕುಸಿದ ಕಾರಣ ಎರಡೂ ಮನೆಯ ಸದಸ್ಯರು ಮನೆಯಲ್ಲೇ ಸಿಲುಕಿ, ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಬೆಳಗ್ಗೆ ಬಂದ ಅಧಿಕಾರಿಗಳು ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಿ ನಾಲ್ವರನ್ನು ರಕ್ಷಿಸಿದ್ದಾರೆ

vlcsnap 2017 09 27 08h59m24s220

vlcsnap 2017 09 27 08h59m39s109

vlcsnap 2017 09 27 09h00m53s96

vlcsnap 2017 09 27 09h01m04s194

vlcsnap 2017 09 27 09h01m16s58

 

Share This Article
Leave a Comment

Leave a Reply

Your email address will not be published. Required fields are marked *