ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್

Public TV
2 Min Read
Yatnal CM Bommai

– ಐದೈದು ಖಾತೆ ಇಟ್ಕೊಂಡು ಕೂರೋದು ಸರಿಯಲ್ಲ
– ಈಶ್ವರಪ್ಪಗೆ ಸಚಿವ ಸ್ಥಾನ ಕೊಡಿ

ವಿಜಯಪುರ: ಪ್ರಧಾನಿ ಮೋದಿ (Naredra Modi) ಅವರು ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಹುದ್ದೆ ಬಿಟ್ಟು ಬೇರೆ ಯಾವ ಖಾತೆಯನ್ನೂ ಅವರು ಹೊಂದಿರಲಿಲ್ಲ. ಹಾಗೆಯೇ ಬೊಮ್ಮಾಯಿ (Basavaraj Bommai) ಅವರು ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಒತ್ತಾಯಿಸಿದ್ದಾರೆ.

Basangouda Patil Yatnal

ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೆಲವೊಂದು ಖಾಲಿ ಇರುವ ಖಾತೆಗಳನ್ನು ಸಿಎಂ ತಾವೇ ಇಟ್ಟುಕೊಂಡು ಕೂರಬಾರದು. ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಐದೈದು ಖಾತೆ ಒಬ್ಬರೇ ಇಟ್ಟುಕೊಂಡು ಕೂರೋದು ಸರಿಯಲ್ಲ. ಮೋದಿಯವರು ಸಿಎಂ ಆಗಿದ್ದಾಗ ಸಿಎಂ ಬಿಟ್ಟು ಬೇರೆ ಯಾವ ಖಾತೆಯನ್ನೂ ಇಟ್ಟುಕೊಂಡಿರಲಿಲ್ಲ. ಅದೇ ರೀತಿ ಬೊಮ್ಮಾಯಿ (Basavaraj Bommai) ಅವರು ಕೂಡ ಸಿಎಂ ಸ್ಥಾನ ಬಿಟ್ಟು ಉಳಿದೆಲ್ಲವುಗಳನ್ನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಚೀನಾದ ರಹಸ್ಯ ಪೊಲೀಸ್‌ ಠಾಣೆ ಕಾರ್ಯಾಚರಣೆ!

K S ESHWARAPPA

ಈಶ್ವರಪ್ಪನವರ (Eshwarappa) ಮೇಲೆ ಸುಳ್ಳು ಆರೋಪ ಮಾಡಿದ ಕಾರಣ ರಾಜಿನಾಮೆ ನೀಡಿದ್ದರು. ಈಗ ಅವರಿಗೂ ಸಚಿವ ಸ್ಥಾನ ನೀಡಬೇಕು. ಅದರೊಂದಿಗೆ ಬಸವರಾಜ ಹೊರಟ್ಟಿ (Basavaraj Horatti) ಅವರಿಗೂ ನೀಡಿದ್ದ ಭರವಸೆಯಂತೆ ಸಭಾಪತಿ ಸ್ಥಾನ ಕೊಡಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಪಕ್ಷದ ಮೇಲೆ ನಂಬಿಕೆ ಹೊರಟುಹೋಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬೀದರ್‌ನ ಮರದಾಸಾದಲ್ಲಿ (Madrasa) ಆಯುಧ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅಲ್ಲಿ ಅಂಬಾಭವಾನಿ ಗುಡಿ ಇದ್ದದ್ದು ಸತ್ಯ. ಅಲ್ಲಿ ಪೂಜೆ ಮಾಡಿದ್ದರಲ್ಲಿ ತಪ್ಪಿಲ್ಲ. ಹಲವು ವರ್ಷಗಳಿಂದಲೂ ಅಲ್ಲಿ ಪೂಜೆ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕಲ್ಯಾಣ ಪರ್ವ ಕಾರ್ಯಕ್ರಮ ಇಬ್ಭಾಗ – ಬಸವ ಭಕ್ತರು ಅಸಮಾಧಾನ

Siddaramaiah 6

ಶಿಕ್ಷಕರ (Teachers) ಅಕ್ರಮ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರ ಕಾಲದಲ್ಲಿ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಮೆರಿಟ್ ಇಲ್ಲ, ಅರ್ಜಿ ಇಲ್ಲ, ಡೈರೆಕ್ಟ್ ಸೆಲೆಕ್ಷನ್ ಮಾಡಿಕೊಂಡಿದ್ದಾರೆ. ಈ ಪ್ರಮಾದಿಂದಾಗಿ ಅವರನ್ನು ಬಂಧಿಸಿರುವುದು ಸರಿಯಾಗಿಯೇ ಇದೆ. ಸಿಒಡಿ ತನಿಖೆ ನಡೆಸಿ ಇದಕ್ಕೊಂದು ತಾರ್ಕಿಕ ಅಂತ್ಯ ಕೊಡಬೇಕೆಂದು ಒತ್ತಾಯಿಸಿದ್ದಾರೆ.

mysuru

ಟಿಪ್ಪು ಮತಾಂಧ ರಾಜ: ಟಿಪ್ಪು ಹೆಸರಿಗೆ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ (Wodeyar Express) ಹೆಸರನ್ನು ಇಟ್ಟಿದ್ದು, ಒಳ್ಳೆಯ ವಿಚಾರ. ಟಿಪ್ಪು ಲಕ್ಷಾಂತರ ಹಿಂದೂಗಳನ್ನ ಕೊಲೆ ಮಾಡಿದ ಮತಾಂಧ ರಾಜ. ಹೈದರ್ ಅಲಿ ಒಡೆಯರ್ ಆಸ್ಥಾನಲ್ಲಿ ಸೈನಿಕನಾಗಿದ್ದ. ಅವರೆಲ್ಲಾ ಮೋಸ ಮಾಡಿದವರು. ಆ ರೈಲಿಗೆ ಟಿಪ್ಪು ಅಂತಾ ಹೆಸರಿಟ್ಟಿದ್ದೇ ತಪ್ಪು. ಒಡೆಯರ್ ಅವರ ಹೆಸರು ಇಟ್ಟಿದ್ದು ಒಳ್ಳೆಯದೇ ಆಯ್ತು ಎಂದು ಶ್ಲಾಘಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *