ಬಿಜೆಪಿ ಪರವಾಗಿ ಸುನಾಮಿ ಎದ್ದಿದೆ: ಅಪರ್ಣಾ ಯಾದವ್

Public TV
1 Min Read
Aparna Yadav 1

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಸುನಾಮಿ ಎದ್ದಿದೆ ಮತ್ತು ಪಕ್ಷವು ಅಧಿಕ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕಿ ಅಪರ್ಣಾ ಯಾದವ್ ಹೇಳಿದ್ದಾರೆ.

yogi 2

ಸಂಸದ ರವಿ ಕಿಶನ್ ಅವರೊಂದಿಗೆ ಅಯೋಧ್ಯೆಯಲ್ಲಿ ರೋಡ್ ಶೋ ನಡೆಸಿದ ಅಪರ್ಣಾ ಯಾದವ್ ಅವರು, ತಮ್ಮ ಕ್ಷೇತ್ರದ ಪಕ್ಷದ ಅಭ್ಯರ್ಥಿ ವೇದ್ ಪ್ರಕಾಶ್ ಗುಪ್ತಾ ಪರ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಇದು ಅಲೆಯಲ್ಲ ಸುನಾಮಿ. ಭಾರತೀಯ ಜನತಾ ಪಕ್ಷ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ. ಬಿಜೆಪಿಯ ಬಹುತೇಕ ಕೇಂದ್ರ ಸಚಿವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ನಾನು ಬಿಜೆಪಿ ಅಭ್ಯರ್ಥಿಗೆ ಮತ ಕೇಳಲು ಅಯೋಧ್ಯೆಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಕಲಬುರಗಿಯ ಐವರು ವಿದ್ಯಾರ್ಥಿಗಳು

ಸಮಾಜವಾದಿ ಪಕ್ಷವು ಇಲ್ಲಿ ಭಜನ ಸ್ಥಳವನ್ನು ನಿರ್ಮಿಸಿದೆ. ನಾನು ಶ್ರೀಕೃಷ್ಣನ ಧನಸ್ಸನ್ನು ನೋಡಿದ್ದೇನೆ. ಶ್ರೀಕೃಷ್ಣನ ಬಿಲ್ಲು ಬಾಣಗಳನ್ನು ಸರಿಯಾಗಿ ತಯಾರಿಸಲು ಸಾಧ್ಯವಾಗದ ಸರ್ಕಾರ ಏನು ಮಾಡುತ್ತದೆ? ‘ಬಾಬಾ’ ಮುಖ್ಯಮಂತ್ರಿ ಲ್ಯಾಪ್‍ಟಾಪ್‍ಗಳನ್ನು ವಿತರಿಸಿದ್ದಾರೆ. ಆದರೆ ಅವರು ಅದನ್ನು ಸ್ವತಃ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ನಾಲ್ಕು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಉಳಿದ ಮೂರು ಹಂತಗಳ ಮತದಾನ ಫೆಬ್ರವರಿ 27, ಮಾರ್ಚ್ 3 ಮತ್ತು 7 ರಂದು ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಇದನ್ನೂ ಓದಿ: ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ರೊಮೇನಿಯಾಗೆ ವಿಮಾನ – ಏರ್ ಇಂಡಿಯಾ ಯೋಜನೆ

Share This Article
Leave a Comment

Leave a Reply

Your email address will not be published. Required fields are marked *